Friday, June 5, 2026
Homeಕರಾವಳಿಬೆಳ್ತಂಗಡಿಯಲ್ಲಿ ಮತ್ತೆ ಕಳ್ಳರ ಕೈಚಳಕ ಶುರು:ಅಂಗಡಿಯಿಂದ ಅಡಿಕೆ ಕಳ್ಳತನ

ಬೆಳ್ತಂಗಡಿಯಲ್ಲಿ ಮತ್ತೆ ಕಳ್ಳರ ಕೈಚಳಕ ಶುರು:ಅಂಗಡಿಯಿಂದ ಅಡಿಕೆ ಕಳ್ಳತನ

- Advertisement -
- Advertisement -

ಬೆಳ್ತಂಗಡಿ : ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ದಿನೇ ದಿನೇ ಜಾಸ್ತಿಯಾಗುತ್ತಿದ್ದು ಆರೋಪಿಗಳ ಸುಳಿವು ಮಾತ್ರ ಪೊಲೀಸರಿಗೆ ಸಿಗದೆ ತಲೆನೋವಾಗಿ ಪರಿಣಮಿಸಿದೆ.

ಬೆಳ್ತಂಗಡಿ ಬಸ್ ನಿಲ್ದಾಣದ ಪಕ್ಕದಲ್ಲಿ ಮತ್ತೆ ಅಂಗಡಿಯ ಶೀಟ್ ಜಾರಿಸಿ ಕಳ್ಳರು ನುಗ್ಗಿ ಎರಡು ಕ್ವಿಂಟಾಲ್ ಅಡಿಕೆ ಕದ್ದಿದ್ದಾರೆ.

ಬೆಳ್ತಂಗಡಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ನಗರದ ಪಂಚಾಯತ್ ನೀರಿನ ಟ್ಯಾಂಕ್ ಹೋಗುವ ರಸ್ತೆಯಲ್ಲಿರುವ ಸವಣಾಲು ನಿವಾಸಿ ಜಗದೀಶ್ ಗೌಡ ಮಾಲಕತ್ವದ ಶ್ರೀ ದುರ್ಗಾ ಸುಪಾರಿ ಟ್ರೇಡರ್ಸ್ ಎಂಬ ಹೆಸರಿನ ಅಂಗಡಿಯಿಂದ ತೊಂಬತ್ತು ಸಾವಿರ ಮೌಲ್ಯದ ಎರಡು ಕ್ವಿಂಟಾಲ್ ಅಡಿಕೆ ಕಳ್ಳತನ ಮಾಡಲಾಗಿದೆ‌.

ಸೋಮವಾರ ಎಂದಿನಂತೆ ಅಂಗಡಿಯಲ್ಲಿ ಅಡಿಕೆ ಲೋಡ್ ಮಾಡಲು ಹೋದಾಗ ಅಂಗಡಿಯ ಮೇಲ್ಭಾಗದ ಸಿಮೆಂಟ್ ಶೀಟ್ ಜಾರಿದ್ದು ಕಂಡಿದೆ. ಸುತ್ತಮುತ್ತ ಪರಿಶೀಲನೆ ನಡೆಸಿದಾಗ ಹಿಂಭಾಗದಲ್ಲಿ ಕಳ್ಳತನ ಮಾಡಿ ಬಿಟ್ಟು ಹೋದ ಎರಡು ಕಬ್ಬಿಣದ ಏಣಿ ಪತ್ತೆಯಾಗಿದೆ. ತಕ್ಷಣ ಮಾಲಕರು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಂಗಳವಾರ ಅಂಗಡಿಗೆ ಹೋಗಿ ತನಿಖೆ ನಡೆಸಿದ್ದು ಪ್ರಕರಣದಲ್ಲಿ ಭಾಗಿಯಾದ ಕಳ್ಳರ ಬಗ್ಗೆ ಮಹತ್ವದ ಸುಳಿವು ಪೊಲೀಸರಿಗೆ ಸಿಕ್ಕಿದ್ದು ಶೀಘ್ರದಲ್ಲೇ ಪ್ರಕರಣ ಭೇದಿಸಲಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!