Saturday, June 6, 2026
Homeಕರಾವಳಿಉಡುಪಿಉಡುಪಿ: ಅಕ್ಟೋಬರ್‌ 1 ರಿಂದ ಆಟೋ ರಿಕ್ಷಾ ಪ್ರಯಾಣ ದರದಲ್ಲಿ ಏರಿಕೆ

ಉಡುಪಿ: ಅಕ್ಟೋಬರ್‌ 1 ರಿಂದ ಆಟೋ ರಿಕ್ಷಾ ಪ್ರಯಾಣ ದರದಲ್ಲಿ ಏರಿಕೆ

- Advertisement -
- Advertisement -

ಉಡುಪಿ: ಜಿಲ್ಲೆಯಲ್ಲಿ ಅಕ್ಟೋಬರ್‌ 1 ರಿಂದ ಆಟೋ ರಿಕ್ಷಾ ಪ್ರಯಾಣ ದರ 1.5 ಕಿ.ಮೀ. ಕನಿಷ್ಠ ದರ 40 ರೂ.ಗೆ ಏರಿಕೆಯಾಗಲಿದೆ. ಉಡುಪಿ ಜಿಲ್ಲಾ ಸಾರಿಗೆ ಪ್ರಾಧಿಕಾರವು ಆಟೋರಿಕ್ಷಾಗಳಿಗೆ ಪ್ರಯಾಣ ದರವನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ.

ಜಿಲ್ಲೆಯ ಎಲ್ಲಾ ಆಟೋರಿಕ್ಷಾಗಳಿಗೆ ಫಾಗ್ ಮೀಟರ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಸೆ.31ರೊಳಗೆ ಕಡ್ಡಾಯವಾಗಿ ರಿಕ್ಯಾಲೀಬರೇಷನ್ ಹಾಗೂ ಸೀಲ್ ಮಾಡಿಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಪ್ರಭಾರ ಕಾರ್ಯದರ್ಶಿ ರವಿಶಂಕರ್ ಪಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!