- Advertisement -
![]()
- Advertisement -
ಬೆಳಗಾವಿ: ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದ ಬಡ ಹಿಂದೂ ಕುಟುಂಬದ ಬಾಲಕಿಯ ಅಂತ್ಯಕ್ರಿಯೆಗೆ ಮುಸ್ಲಿಂ ಯುವಕರು ಸಹಕಾರ ನೀಡುವ ಮೂಲಕ ಸಾಮರಸ್ಯದ ಸಂದೇಶ ಸಾರಿದ್ದಾರೆ.
ಮೂಲತಃ ಉಡುಪಿ ನಿವಾಸಿ ವಿದ್ಯಾಶ್ರೀ(10) ಎಂಬ ಬಾಲಕಿ ಕೆಲ ವರ್ಷಗಳಿಂದ ಬೆಳಗಾವಿ ವೀರಭದ್ರೇಶ್ವರ ನಗರದಲ್ಲಿ ತಾಯಿಯೊಂದಿಗೆ ವಾಸವಾಗಿದ್ದಳು.ಗುರುವಾರ ಬೆಳಿಗ್ಗೆ ಮಹಡಿ ಮೇಲೆ ಹೂವು ಕೀಳುವಾಗ ಆಯತಪ್ಪಿ ಬಿದ್ದು ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಳು. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಬಾಲಕಿಯನ್ನು ಸ್ಥಳೀಯ ಮುಸ್ಲಿಂ ಯುವಕರು ಆಸ್ಪತ್ರೆಗೆ ಸೇರಿದ್ದರು. ಆದರೆ ಬಾಲಕಿ ಕೊನೆಯುಸಿರೆಳೆದಿದ್ದಳು.
ಆಸ್ಪತ್ರೆ ವೆಚ್ಚ ಭರಿಸಲು ತಾಯಿಗೆ ಸಾಧ್ಯವಾಗದ ಕಾರಣ, ವೀರಭದ್ರೇಶ್ವರ ನಗರದ ಕೆಲ ಮುಸ್ಲಿಂ ಮುಖಂಡರು ಸೇರಿ ಬಾಲಕಿಯ ಆಸ್ಪತ್ರೆಯ ವೆಚ್ಚ ಭರಿಸಿದ್ದಾರೆ.ಇದಲ್ಲದೆ ಬಾಲಕಿ ಶವವನ್ನು ಮನೆಗೆ ತಂದು ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದಾರೆ.ಲಿಂಗಾಯಿತ ಸಂಪ್ರದಾಯದಂತೆಯೇ ಬಾಲಕಿಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
- Advertisement -


