Sunday, May 5, 2024
Homeತಾಜಾ ಸುದ್ದಿಮಗುವೊಂದರ ದೇಹದಲ್ಲಿ ಹರಿಯುತ್ತೆ ಬಿಳಿ ರಕ್ತ; ವೈದ್ಯ ಲೋಕಕ್ಕೆ ಅಚ್ಚರಿ ಈ ಪುಟಾಣಿ

ಮಗುವೊಂದರ ದೇಹದಲ್ಲಿ ಹರಿಯುತ್ತೆ ಬಿಳಿ ರಕ್ತ; ವೈದ್ಯ ಲೋಕಕ್ಕೆ ಅಚ್ಚರಿ ಈ ಪುಟಾಣಿ

spot_img
- Advertisement -
- Advertisement -

ಮಧ್ಯಪ್ರದೇಶ; ಇಲ್ಲಿನ ವರ್ವಾನಿ ಜಿಲ್ಲೆಯಲ್ಲಿ ಆನಾರೋಗ್ಯದಿಂದ ಬಳಲುತ್ತಿದ್ದ ಒಂದೂವರೆ ವರ್ಷದ ಮಗುವಿನ ರಕ್ತ ಪರೀಕ್ಷೆ ಮಾಡಿದಾಗ ವೈದ್ಯರೇ ದಂಗಾಗಿ ಹೋಗಿದ್ದಾರೆ. ಮಗುವಿನ ದೇಹದಲ್ಲಿ ಬಿಳಿ ರಕ್ತ ಹರಿಯೋದು ಗೊತ್ತಾಗಿದೆ.

ಅನಾಯಾ ಎಂಬ ಮಗುವನ್ನು ತಂದೆ ಇಮ್ರಾನ್ ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಈ ವೇಳೆ ವೈದ್ಯರು ರಕ್ತ ಪರೀಕ್ಷೆ ನಡೆಸಲು ಸೂಚಿಸಿದ್ದಾರೆ. ಪರೀಕ್ಷೆ ವೇಳೆ ಮಗುವಿನ ರಕ್ತನಾಳಗಳಲ್ಲಿ ಕೆಂಪು ರಕ್ತದ ಬದಲು ಬಿಳಿ ರಕ್ತ ಹರಿಯುವುದು ಕಂಡು ಬಂದಿದೆ.

ಬಳಿಕ ಅನಾಯಾಳನ್ನು ಚಿಕಿತ್ಸೆಗೆಂದು ಮಹಾರಾಷ್ಟ್ರದ ಶಹದಾಗೆ ಕರೆದುಕೊಂಡು ಹೋಗಿದ್ದರು, ಆ ವೇಳೆ ಲ್ಯಾಬ್ ಪರೀಕ್ಷೆಗೆ ಎಂದು ತೆಗೆದ ರಕ್ತ ಬಿಳಿಯಾಗಿತ್ತು. ಅಲ್ಲಿಂದ ಅನಾಯಾಳನ್ನು ಮಹಾರಾಷ್ಟ್ರದ ಧುಲಿಯಾಗೆ ಕರೆದುಕೊಂಡು ಹೋಗುವಂತೆ ವೈದ್ಯರು ತಿಳಿಸಿದ್ದಾರೆ. ಅಲ್ಲಿ ಕೂಡ ರಕ್ತ ಪರೀಕ್ಷೆ ನಡೆಸಿದ ವೇಳೆ ಬಿಳಿ ರಕ್ತ ಪತ್ತೆಯಾಗಿದೆ. ಬಳಿಕ ಅಲ್ಲಿನ ವೈದ್ಯರು ಚಿಕಿತ್ಸೆಗಾಗಿ ಮುಂಬೈನ ಕೆಇಎಂ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದಾರೆ ಅಲ್ಲಿ ಕೂಡ ಇದೇ ರೀತಿ‌ ಕಂಡು ಬಂದಿದೆ.ಇದೀಗ ಈ ಬಗ್ಗೆ ವೈದ್ಯರು ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!