Saturday, June 13, 2026
Homeಕರಾವಳಿಉಡುಪಿಕಾರ್ಕಳ: ರಸ್ತೆ ದುರಸ್ತಿಗೆ ಆಗ್ರಹಿಸಿ ವಿನೂತನ ಪ್ರತಿಭಟನೆ: “ಚಿನ್ನದ ರಸ್ತೆ ಉದ್ಘಾಟನೆ” ಅಣಕು ಪ್ರದರ್ಶನ

ಕಾರ್ಕಳ: ರಸ್ತೆ ದುರಸ್ತಿಗೆ ಆಗ್ರಹಿಸಿ ವಿನೂತನ ಪ್ರತಿಭಟನೆ: “ಚಿನ್ನದ ರಸ್ತೆ ಉದ್ಘಾಟನೆ” ಅಣಕು ಪ್ರದರ್ಶನ

- Advertisement -
- Advertisement -

ಕಾರ್ಕಳ: ಕಾರ್ಕಳ ಪುರಸಭಾ ವ್ಯಾಪ್ತಿಯ ಮೂರು ಮಾರ್ಗದಿಂದ ಆನೆಕೆರೆ ಮಸೀದಿವರೆಗಿನ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ. ರಸ್ತೆಯಲ್ಲಿ ಹೊಂಡ ಗುಂಡಿಗಳಿದ್ದು ವಾಹನ ಸವಾರರು ಸಂಚರಿಸೋದೆ ಕಷ್ಟವಾಗಿದೆ. ಅಪಘಾತಗಳೂ ಹೆಚ್ಚಾಗ್ತಾ ಇವೆ. ರಸ್ತೆ ದುರಸ್ತಿಗೆ ಎಷ್ಟೇ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ಹೀಗಾಗಿ ರಸ್ತೆ ದುರಸ್ತಿಗೆ ಆಗ್ರಹಿಸಿ ಇವತ್ತು ಪುರಸಭೆ ಸದಸ್ಯ ಶುಭದ ರಾವ್ ನೇತೃತ್ವದಲ್ಲಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಯಿತು.

ಕಾರ್ಕಳ ಬಸ್ಸ್ ನಿಲ್ದಾಣದಿಂದ ಕಾಮಧೇನು ಹೋಟೆಲ್ ವರೆಗೆ ನಡೆದ ಮೆರವಣಿಗೆಯಲ್ಲಿ ಕೋಣಗಳು, ಚಂಡೆ ವಾದಕರು ಭಾಗಿಯಾಗಿ ಗಮನ ಸೆಳೆದರು. ‘ಚಿನ್ನದ ರಸ್ತೆ ಉದ್ಘಾಟನೆ’ ಅಣಕು ಪ್ರದರ್ಶನ ಕೂಡಾ ನಡೆಯಿತು. ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ರು..

- Advertisement -

Latest News

error: Content is protected !!