Thursday, June 25, 2026
Homeಕರಾವಳಿಮಂಗಳೂರು; ನಗರದ ವಿವಿಧೆಡೆ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ವರು ಅರೆಸ್ಟ್

ಮಂಗಳೂರು; ನಗರದ ವಿವಿಧೆಡೆ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ವರು ಅರೆಸ್ಟ್

- Advertisement -
- Advertisement -

ಮಂಗಳೂರು; ನಗರದ ವಿವಿಧೆಡೆ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ವರನ್ನು ರೌಂಡ್ಸ್ ನಲ್ಲಿದ್ದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸೆ.14 ರಂದು ರಾತ್ರಿ 10ರ ಸುಮಾರಿಗೆ ಎಎಸ್ಐ ಶ್ಯಾಮಸುಂದರ್ ಅವರು ರೌಂಡ್ಸ್ ನಲ್ಲಿ ಇದ್ದಾಗ ಯೆಯ್ಯಾಡಿ‌ ಬಳಿ ದೀಕ್ಷಿತ್ ಎಂಬಾತನನ್ನು ಹಾಗೂ ಎಎಸ್ ಐ ಮೋಹನ್ ಮತ್ತು ಸಿಬ್ಬಂದಿ ಕೋಡಿಕಲ್ ಬಂಗಾಡಿ ಬಳಿ ಧನೇಶ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಎಎಸ್‌ಐ ವಿಜಯ್ ಕಾಂಚನ್ ಅವರು ರೌಂಡ್ಸ್ ನಲ್ಲಿದ್ದಾಗ ಫೈಸಲ್‌ನಗರದಿಂದ ಇಕ್ಬಾಲ್ (42) ಎಂಬಾತನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗೂಡ್ಸ್ ಶೆಡ್ ರಸ್ತೆ ಅರಣ್ಯ ಕಚೇರಿಯ ರೈಲ್ವೆ ಹಳಿಗಳ ಬಳಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಕಸ್ಬಾ ಬೆಂಗ್ರೆಯ ನಿವಾಸಿ ಇಸ್ಮಾಯಿಲ್ ಫಾರನ್ (23) ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

- Advertisement -

Latest News

error: Content is protected !!