- Advertisement -
- Advertisement -
ನವದೆಹಲಿ: ಟೆನ್ನಿಸ್ ಮಾಂತ್ರಿಕ ರೋಜರ್ ಫೆಡರರ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ.20 ಗ್ರ್ಯಾಂಡ್ ಸ್ಲಾಮ್ ಗೆದ್ದಿರುವ ರೋಜರ್ ಫೆಡರರ್ ಗುರುವಾರ ಟ್ವೀಟ್ ಮಾಡುವ ಮೂಲಕ ನಿವೃತ್ತಿ ಘೋಷಿಸಿದ್ದಾರೆ.
21ನೇ ವಯಸ್ಸಿನಲ್ಲಿ ವಿಂಬಲ್ಡನ್ ಗೆದ್ದಿರುವ ಈ ಆಟಗಾರ ವೃತ್ತಿ ಜೀವನದಲ್ಲಿ 103 ಎಟಿಪಿ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಫೆಡರರ್ 8 ಬಾರಿ ವಿಂಬಲ್ಡನ್ ಗೆದ್ದಿದ್ದು ವಿಶ್ವದಾಖಲೆಯಾಗಿದೆ. ಫೆಡರರ್ 310 ವಾರಗಳ ಕಾಲ ನಂಬರ್ 1 ಟೆನಿಸ್ ಆಟಗಾರರಾಗಿದ್ದರು.
ಇದೀಗ ರೋಜರ್ ಫೆಡರರ್ ನಿವೃತ್ತಿ ಘೋಷಿಸಿರೋದು ಅವರ ಅಸಂಖ್ಯಾತ ಅಭಿಮಾನಿಗಳಿಗೆ ನಿರಾಸೆ ಹಾಗೂ ಬೇಸರ ಮೂಡಿಸಿದೆ.
- Advertisement -