Thursday, June 4, 2026
Homeತಾಜಾ ಸುದ್ದಿ ಪುತ್ತೂರು:ಬಸ್ ನಲ್ಲಿ ಡ್ರೈವರ್ ಕಂಡಕ್ಟರ್ ಇಲ್ಲದ ವೇಳೆ ಹಿಂದಕ್ಕೆ ಚಲಿಸಿದ ಬಸ್; ವಿದ್ಯಾರ್ಥಿಯ ಸಮಯಪ್ರಜ್ಞೆಯಿಂದಾಗಿ ತಪ್ಪಿದ...

 ಪುತ್ತೂರು:ಬಸ್ ನಲ್ಲಿ ಡ್ರೈವರ್ ಕಂಡಕ್ಟರ್ ಇಲ್ಲದ ವೇಳೆ ಹಿಂದಕ್ಕೆ ಚಲಿಸಿದ ಬಸ್; ವಿದ್ಯಾರ್ಥಿಯ ಸಮಯಪ್ರಜ್ಞೆಯಿಂದಾಗಿ ತಪ್ಪಿದ ಭಾರೀ ಅನಾಹುತ

- Advertisement -
- Advertisement -

ಪುತ್ತೂರು: ಮಂಗಳವಾರ ಸಂಜೆ 4-25 ರ ವೇಳೆಗೆ ಪುತ್ತೂರು ಬಸ್ ನಿಲ್ದಾಣದಿಂದ ಉಪ್ಪಿನಂಗಡಿಗೆ ತೆರಳಬೇಕಿದ್ದ KA21-F0057 ಸಂಖ್ಯೆಯ ಬಸ್, ನಿಲ್ದಾಣದಲ್ಲಿ ನಿಂತಿತ್ತು. ಅದಾಗಲೇ ಪ್ರಯಾಣಿಕರಿಂದ ತುಂಬಿತ್ತು. ಬಸ್ ನಲ್ಲಿ ಡ್ರೈವರ್ ಕಂಡಕ್ಟರ್ ಇರಲಿಲ್ಲ. ಈ ವೇಳೆ ಏಕಾಏಕಿ ಬಸ್ ಹಿಂದಕ್ಕೆ ಚಲಿಸಿದೆ. ಪ್ರಯಾಣಿಕರ ಬೊಬ್ಬೆಯನ್ನು ನೋಡಿದ ಉಪ್ಪಿನಂಗಡಿಯ ವಿದ್ಯಾರ್ಥಿ ಸಿಝಾನ್ ಹಸನ್ ತಕ್ಷಣವೇ ಚಾಲಕನ ಸೀಟಿಗೆ ಹೋಗಿ ಬ್ರೇಕ್ ಹಾಕಿ ಆಗಬಹುದಾದ ಅನಾಹುತ ತಪ್ಪಿಸಿದ್ದಾನೆ.

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ  ಸಿಝಾನ್‌ ಹಸನ್‌ ಸಮಯಪ್ರಜ್ಞೆಯಿಂದಾಗಿ ಸಂಭಾವ್ಯ ಭಾರೀ ಅನಾಹುತವನ್ನು ತಪ್ಪಿದೆ. ಯುವಕನ ಈ ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.ಸಿಝಾನ್ ಉಪ್ಪಿನಂಗಡಿಯ ಉದ್ಯಮಿ ಮೈನಾ ಕ್ಲೋತ್ ಸೆಂಟರ್ ಮಾಲೀಕ ಸಲಾಂ ಮೈನಾ ವರ ಪುತ್ರ.

- Advertisement -

Latest News

error: Content is protected !!