Sunday, June 14, 2026
Homeಕರಾವಳಿಬಂಟ್ವಾಳ : ಕೆಲಸಕ್ಕೆಂದು ಸಂಜೆ ಮನೆಯಿಂದ ತೆರಳಿದ ವ್ಯಕ್ತಿ ನಾಪತ್ತೆ

ಬಂಟ್ವಾಳ : ಕೆಲಸಕ್ಕೆಂದು ಸಂಜೆ ಮನೆಯಿಂದ ತೆರಳಿದ ವ್ಯಕ್ತಿ ನಾಪತ್ತೆ

- Advertisement -
- Advertisement -

ಬಂಟ್ವಾಳ : ಕೆಲಸಕ್ಕೆಂದು ಸಂಜೆ ಮನೆಯಿಂದ ತೆರಳಿದ ವ್ಯಕ್ತಿ ಬಿಸಿರೋಡಿನಲ್ಲಿ  ಬೈಕ್‌ ಇಟ್ಟು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಲ್ಲಿ ದೂರು ದಾಖಲಾಗಿದೆ.‌ಎರ್ಮಾಳ ಕಂಡದೊಟ್ಟು ನಿವಾಸಿ ಉಮೇಶ್ ಕುಲಾಲ್ (42) ಕಾಣೆಯಾದ ವ್ಯಕ್ತಿ.

ಉಮೇಶ್ ಅವರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಸೆ.12 ರಂದು ದ್ವಿಚಕ್ರ ವಾಹನದಲ್ಲಿ ಮನೆಯಿಂದ ಕೆಲಸಕ್ಕೆಂದು ತೆರಳಿದವರು ಕೆಲಸಕ್ಕೆ ಹೋಗದೆ ವಾಪಾಸು ಮನೆಗೂ ಬಾರದೆ ಕಾಣೆಯಾಗಿದ್ದಾರೆ ಎಂದು ಅವರ ಪತ್ನಿ
ಚಂದ್ರಾವತಿ ದೂರಿನಲ್ಲಿ ತಿಳಿಸಿದ್ದಾರೆ.

ಇವರು ವಿಪರೀತ ಕುಡಿತದ ಚಟ ಹೊಂದಿದ್ದು, ಕಳೆದ ನಾಲ್ಕು ತಿಂಗಳಿನಿಂದ ಕುಡಿಯುವುದನ್ನು ಬಿಟ್ಟಿದ್ದರು. ಆದರೆ ಅ ಬಳಿಕ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದರು ಎಂದು ಪತ್ನಿ ತಿಳಿಸಿದ್ದಾರೆ.

ಮನೆಯಿಂದ ದ್ವಿಚಕ್ರ ದಲ್ಲಿ ತೆರಳಿದ ಇವರು ಬಿಸಿರೋಡಿನಲ್ಲಿ ವಾಹನ ಇಟ್ಟು ಅಲ್ಲಿಂದ ಕಾಣೆಯಾಗಿದ್ದಾರೆ.‌ ಪೋಲಿಸರಿಗೆ ದ್ವಿಚಕ್ರ ವಾಹನ ಹಾಗೂ ಇತರ ವಸ್ತುಗಳು ಕೈಗೆ ಸಿಕ್ಕಿವೆ. ಈತನ ಪತ್ತೆಗಾಗಿ ಪೋಲಿಸರು ಹುಡುಕಾಟ ಮುಂದುವರೆಸಿದ್ದಾರೆ.

- Advertisement -

Latest News

error: Content is protected !!