Thursday, June 4, 2026
Homeಕರಾವಳಿಉಡುಪಿಉಡುಪಿ: ಅನಾಥ ಶವಗಳ ವಿಲೇವಾರಿಗೆ ಹೆಗಲು ಕೊಟ್ಟ ಹಿರಿಯ ನ್ಯಾಯಾಧೀಶೆ

ಉಡುಪಿ: ಅನಾಥ ಶವಗಳ ವಿಲೇವಾರಿಗೆ ಹೆಗಲು ಕೊಟ್ಟ ಹಿರಿಯ ನ್ಯಾಯಾಧೀಶೆ

- Advertisement -
- Advertisement -

ಉಡುಪಿ: ಅನಾಥ ಶವಗಳ ವಿಲೇವಾರಿಗೆ ಸಮಾಜ ಸೇವಕರೊಂದಿಗೆ ಹಿರಿಯ ನ್ಯಾಯಾಧೀಶರೊಬ್ಬರು ಹೆಗಲು ಕೊಟ್ಟಿದ್ದು  ಮಾನವೀಯತೆ ಮೆರೆದಿದ್ದಾರೆ. ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ನ್ಯಾಯಾಧೀಶೆ ಶರ್ಮಿಳಾ ಅವರು, ಜಿಲ್ಲಾ ನಾಗರಿಕ ಸಮಿತಿಯೊಂದಿಗೆ ಕೈ ಜೋಡಿಸಿ, ನಾಲ್ಕು ಅನಾಥ ಶವಗಳ ಅಂತ್ಯಸಂಸ್ಕಾರದ ವೇಳೆ ಭಾಗವಹಿಸಿ ಜಾಗೃತಿ ಮೂಡಿಸಿದ್ದಾರೆ.

ಹೆಣ್ಣು ಮಕ್ಕಳು ಅಂತ್ಯ ಸಂಸ್ಕಾರದ ವೇಳೆ ರುದ್ರಭೂಮಿಗೆ ಹೋಗಬಾರದೆಂಬ ಮೂಢನಂಬಿಕೆಯನ್ನು ಹೋಗಲಾಡಿಸುವುದರ ಜೊತೆಗೆ ನ್ಯಾಯಧೀಶೆ ಶರ್ಮಿಳಾ ಅವರು ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದಾರೆ. ಉಡುಪಿ ನಗರದ ಬೀಡಿನಗುಡ್ಡೆ ಭಾಗದಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನಾಗರಿಕ ಸಮಿತಿ ಹಾಗೂ ಕಾನೂನು ಸೇವೆ ಪ್ರಾಧಿಕಾರದಿಂದ ನಡೆದ ಸಾಮಾಜಿಕ ಕಾರ್ಯ ಎಲ್ಲರ ಮೆಚ್ಚುಗೆ ಪಡೆದಿದೆ.

- Advertisement -

Latest News

error: Content is protected !!