Friday, June 5, 2026
Homeತಾಜಾ ಸುದ್ದಿಪಂಪ ಮಹಾಕವಿ ರಸ್ತೆ ಹೆಸರು ಬದಲಾವಣೆ ಪ್ರಸ್ತಾವ: ನಿಲುವು ಬದಲಿಸಿದ ಕಸಾಪ

ಪಂಪ ಮಹಾಕವಿ ರಸ್ತೆ ಹೆಸರು ಬದಲಾವಣೆ ಪ್ರಸ್ತಾವ: ನಿಲುವು ಬದಲಿಸಿದ ಕಸಾಪ

- Advertisement -
- Advertisement -

ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ಮಹಾಕವಿ ಪಂಪನ ಹೆಸರಿನ ರಸ್ತೆಗೆ ಕನ್ನಡ ಸಾಹಿತ್ಯ ಪರಿಷತ್ ರಸ್ತೆ ಎಂದು ಬದಲಾಯಿಸಲು ಕಸಾಪ ಅಧ್ಯಕ್ಷರು ಹಾಗೂ ಬಿಜೆಪಿ ಸರ್ಕಾರ ಮುಂದಾಗಿತ್ತು.

ಆದ್ರೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹೆಸರು ಬದಲಾಯಿಸುವ ಪ್ರಸ್ತಾವವನ್ನು ಕೈಬಿಡಲಾಗಿದೆ. ಹೆಸರು ಬದಲಾಯಿಸುವ ಸಾಹಿತ್ಯ ಪರಿಷತ್ ಪ್ರಸ್ತಾವಕ್ಕೆ ಸಾಹಿತ್ಯ ವಲಯದ ಪ್ರಮುಖರು ಮತ್ತು ಕನ್ನಡ ಸಂಘಟನೆಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಕೊನೆಗೂ ಒತ್ತಡಕ್ಕೆ ಮಣಿದ, ಸಾಹಿತ್ಯ ಪರಿಷತ್ ತನ್ನ ನಿಲುವು ಬದಲಾಯಿಸಿದೆ.

‘ಪಂಪ ಮಹಾಕವಿ ರಸ್ತೆಯ ಹೆಸರನ್ನು ಬದಲಿಸಬೇಕೆಂಬ ಪ್ರಸ್ತಾವವನ್ನು ಬಿಬಿಎಂಪಿಗೆ ಸಲ್ಲಿಸುವುದಿಲ್ಲ’ ಎಂದು ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಸ್ಪಷ್ಟಪಡಿಸಿದ್ದಾರೆ.

- Advertisement -

Latest News

error: Content is protected !!