Sunday, June 7, 2026
Homeತಾಜಾ ಸುದ್ದಿಗಟ್ಟಿಮೇಳ ಧಾರವಾಹಿ ಖ್ಯಾತಿಯ ನಟಿ ಆರತಿಗೆ ಹ್ಯಾಕರ್ ಗಳ ಕಾಟ

ಗಟ್ಟಿಮೇಳ ಧಾರವಾಹಿ ಖ್ಯಾತಿಯ ನಟಿ ಆರತಿಗೆ ಹ್ಯಾಕರ್ ಗಳ ಕಾಟ

- Advertisement -
- Advertisement -

ಬೆಂಗಳೂರು: ಗಟ್ಟಿಮೇಳ ಧಾರವಾಹಿ ಖ್ಯಾತಿಯ ನಟಿ ಆರತಿ ಅಲಿಯಾಸ್ ಅಶ್ವಿನಿ ಇನ್ ಸ್ಟಾಗ್ರಾಂನಲ್ಲಿ ಹ್ಯಾಕರ್ ಗಳ ಕಾಟಕ್ಕೆ ತುತ್ತಾದ ಮತ್ತೊಬ್ಬ ನಟಿ.

ಇತ್ತೀಚೆಗೆ ಸ್ಯಾಂಡಲ್ ವುಡ್ ನಟ-ನಟಿಯರು ಸೋಷಿಯಲ್ ಮೀಡಿಯಾದಲ್ಲಿ ಹ್ಯಾಕರ್ ಗಳ ಕಾಟಕ್ಕೆ ಬೇಸತ್ತಿದ್ದಾರೆ. ವಸಿಷ್ಠ ಸಿಂಹ, ಆಶಿಕಾ ರಂಗನಾಥ್ ಸೇರಿದಂತೆ ಕೆಲವು ನಟ-ನಟಿಯರ ಇನ್ ಸ್ಟಾಗ್ರಾಂ ಪೇಜ್ ಹ್ಯಾಕ್ ಆಗಿದ್ದವು.

‘ಗಟ್ಟಿಮೇಳ’ ಧಾರಾವಾಹಿ ನಟಿ ಆರತಿ ಪಾತ್ರಧಾರಿ ಅಶ್ವಿನಿ ಅವರ ಇನ್‌ಸ್ಟಾಗ್ರಾಮ್ ಖಾತೆ ಕೂಡ ಹ್ಯಾಕ್ ಆಗಿದೆ. ಧಾರಾವಾಹಿ ನಟಿಯರ ಇನ್‌ಸ್ಟಾ ಖಾತೆ ಹ್ಯಾಕ್ ಆಗೋದು ಅಪರೂಪ. ಇವರು 1 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದರು. ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ನಟಿಸಿದ ನಂತರದಲ್ಲಿ ಇವರು ಇನ್‌ಸ್ಟಾದಲ್ಲಿ ಸಕ್ರಿಯರಾಗಿದ್ದರು. 

ಇದೀಗ ಗಟ್ಟಿಮೇಳ ಧಾರವಾಹಿ ಖ್ಯಾತಿಯ ನಟಿ ಆರತಿ ತಮ್ಮ ಇನ್ ಸ್ಟಾಗ್ರಾಂ ಪೇಜ್ ಆಗಿದ್ದರಿಂದ ಹೊಸದಾಗಿ ಪೇಜ್ ಕ್ರಿಯೇಟ್ ಮಾಡಿದ್ದರು. ಆದರೆ ಅದೂ ಕೂಡಾ ಹ್ಯಾಕ್ ಆಗಿದೆ. ಹೀಗಾಗಿ ಇದೆಲ್ಲದರಿಂದ ಬೇಸತ್ತು ಸದ್ಯಕ್ಕೆ ಸೋಷಿಯಲ್ ಮೀಡಿಯಾ ಸಹವಾಸವೇ ಬೇಡ ಎಂದು ಹೊರನಡೆದಿದ್ದಾರೆ.

- Advertisement -

Latest News

error: Content is protected !!