- Advertisement -
- Advertisement -
ಉಡುಪಿ; ಹಲವು ದೇವಸ್ಥಾನದಲ್ಲಿ ಕಳ್ಳತನ ಎಸಗಿದ್ದ ಆರೋಪಿ ಕರುಣಾಕರ್ ದೇವಾಡಿಗನಿಗೆ ಕುಂದಾಪುರ ಪ್ರಧಾನ ಸಿವಿಲ್ ಮತ್ತು ಪ್ರಥಮ ದರ್ಜೆ ದಂಡಾಧಿಕಾರಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಇತ್ತೀಚೆಗೆ ಆರೋಪಿ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರವಂತೆ ದೇವಸ್ಥಾನ ಸೇರಿದಂತೆ ಮರವಂತೆಯಲ್ಲಿನ ದೇವಸ್ಥಾನದಲ್ಲಿ ಕುಡುಗೋಲಿನಿಂದ ದೇಗುಲದ ಬೀಗ ಒಡೆದು ಒಳ ಹೋಗುತ್ತಿರುವುದು ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಕರುಣಾಕರ ದೇವಾಡಿಗ ಬಂಧನದ ನಂತರ ಬೇರೆ ದೇವಸ್ಥಾನಗಳಿಂದಲೂ ವಸ್ತುಗಳನ್ನು ಕದ್ದಿರುವುದಾಗಿ ಹೇಳಿಕೆ ನೀಡಿದ್ದ. ಇದೀಗ ಆರೋಪಿಗ ಜಾಮೀನು ದೊರೆತಿದೆ.
- Advertisement -