Thursday, June 4, 2026
Homeಕರಾವಳಿಉಡುಪಿಮಲ್ಪೆ: ಮೀನುಗಾರಿಕಾ ಬೋಟ್‌ ಮುಳುಗಡೆ: ಏಳು ಮಂದಿ ಮೀನುಗಾರರ ರಕ್ಷಣೆ

ಮಲ್ಪೆ: ಮೀನುಗಾರಿಕಾ ಬೋಟ್‌ ಮುಳುಗಡೆ: ಏಳು ಮಂದಿ ಮೀನುಗಾರರ ರಕ್ಷಣೆ

- Advertisement -
- Advertisement -

ಮಲ್ಪೆ: ಮಲ್ಪೆ ಬಂದರಿನಿಂದ ಆಳಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಬೋಟ್‌ ಮುಳುಗಡೆಯಾಗಿದ್ದು, ಏಳು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

ಲತೀಶ್‌ ಮೆಂಡನ್ ಅವರಿಗೆ ಸೇರಿದ ಶ್ರೀ ದುರ್ಗಾ ವೈಷ್ಣವಿ ಬೋಟ್‌ ಮುಳುಗಡೆಯಾಗಿದೆ. ಮೀನುಗಾರಿಕೆ ಮುಗಿಸಿ ವಾಪಾಸ್‌ ಬರುತ್ತಿದ್ದಾಗ ಗಂಗೊಳ್ಳಿ ತೀರದಿಂದ ಸುಮಾರು ಹದಿನೈದು ಮಾರು ಆಳ ದೂರ ಬೋಟಿನ ಕೆಳಭಾಗಕ್ಕೆ ಗಟ್ಟಿಯಾದ ವಸ್ತು ತಾಗಿದೆ. ಪರಿಣಾಮ ಬೋಟ್‌ನೊಳಗಡೆ ನೀರು ನುಗ್ಗಿ ಬೋಟ್‌ ಮುಳುಗಡೆಯಾಗಿದೆ. ಸಮೀಪದಲ್ಲಿದ್ದ ಬೋಟ್‌ನವರು ತಕ್ಷಣ ಧಾವಿಸಿ ಸಂಕಷ್ಟದಲ್ಲಿದ್ದ ಮೀನುಗಾರರನ್ನು ರಕ್ಷಿಸಿದ್ದಾರೆ. ಇನ್ನು ಘಟನೆಯಿಂದ ಸುಮಾರು ಐವತ್ತು ಲಕ್ಷ ನಷ್ಟ ಉಂಟಾಗಿದೆ.

- Advertisement -

Latest News

error: Content is protected !!