Friday, June 5, 2026
Homeತಾಜಾ ಸುದ್ದಿಜಗನ್ನಾಥ್ ಶೆಟ್ಟಿ ಹನಿಟ್ರ್ಯಾಪ್ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್; ಯುವತಿ ಮೂಲಕವೇ ಜಗನ್ನಾಥ್ ಶೆಟ್ಟಿಗೆ ಖೆಡ್ಡಾ...

ಜಗನ್ನಾಥ್ ಶೆಟ್ಟಿ ಹನಿಟ್ರ್ಯಾಪ್ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್; ಯುವತಿ ಮೂಲಕವೇ ಜಗನ್ನಾಥ್ ಶೆಟ್ಟಿಗೆ ಖೆಡ್ಡಾ ತೋಡಿತ್ತು ಸಲ್ಮಾ ಗ್ಯಾಂಗ್

- Advertisement -
- Advertisement -

ಮಂಡ್ಯ: ಮಂಗಳೂರು ಮೂಲದ ಚಿನ್ನದ ವ್ಯಾಪಾರಿ, ಬಿಜೆಪಿ ಮುಖಂಡ ಜಗನ್ನಾಥ ಶೆಟ್ಟಿ ಅವರ ಹನಿ ಟ್ರ್ಯಾಫ್ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕಿದೆ.  ಇದೀಗ ಜಗನ್ನಾಥ್ ಶೆಟ್ಟಿ ಕೊಟ್ಟ ದೂರು ಸುಳ್ಳು, ವೀಡಿಯೋದಲ್ಲಿರುವುದು ಸುಳ್ಳು ಎಂದು ಪೊಲೀಸ್ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಜಗನ್ನಾಥ್ ಶೆಟ್ಟಿಯನ್ನು ಹನಿಟ್ರ್ಯಾಪ್ ಬಲೆಗೆ ಕೆಡವಲು ಹಲವು ದಿನಗಳಿಂದ ಪ್ಲಾನ್ ನಡೆದಿತ್ತು. ಜಗನ್ನಾಥ್ ಶೆಟ್ಟಿ ಜೊತೆಗೆ ಲಾಡ್ಜ್  ಸಿಕ್ಕಿಕೊಂಡಿದ್ದ ಯುವತಿ ಕೂಡ ಸಲ್ಮಾ ಭಾನು ಆಂಡ್ ಟೀಂನ ಸದಸ್ಯೆಯಾಗಿದ್ದಾಳೆ. ಆ ಯುವತಿ ಮೂಲಕವೇ ಜಗನ್ನಾಥ ಶೆಟ್ಟಿಗೆ ಖೆಡ್ಡಾ ತೋಡಿದ್ದಾರೆ ಅನ್ನೋದು ತನಿಖೆಯಿಂದ ಬಯಲಾಗಿದೆ.

ಇನ್ನು ಮೈಸೂರಿನ ದರ್ಶನ್ ಲಾಡ್ಜ್ ನಲ್ಲಿ ರೂಂ ಪಡೆದು, ಯುವತಿಯೊಂದಿಗೆ ಜಗನ್ನಾಥ ಶೆಟ್ಟಿ ಇರೋ ಮಾಹಿತಿ ತಿಳಿದ ಸಲ್ಮಾ ಗ್ಯಾಂಗ್, ದಿಢೀರ್ ಅವರ ರೂಂ ಗೆ ದಾಳಿ ನಡೆಸಿತ್ತು. ದಾಳಿಯ ವೇಳೆಯಲ್ಲಿ ವಿಡಿಯೋ ಕೂಡ ಚಿತ್ರೀಕರಣ ಮಾಡಿಕೊಂಡಿತ್ತು. ಜೊತೆಗೆ ಬಿಜೆಪಿ ಮುಖಂಡ ಜಗನ್ನಾಥ ಶೆಟ್ಟಿಯವರನ್ನು ಮನಬಂದಂತೆ ಥಳಿಸಿರೋ ವಿಡೀಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿತ್ತು. ಇದೀಗ ಇದೆಲ್ಲಾ ಪ್ರಿ ಪ್ಲ್ಯಾನ್ಡ್ ಅನ್ನೋದು ಬಯಲಾಗಿದೆ.

- Advertisement -

Latest News

error: Content is protected !!