Thursday, June 4, 2026
Homeತಾಜಾ ಸುದ್ದಿಒಂದೇ ತಾಯಿಗೆ ಹುಟ್ಟಿದ ಅವಳಿ ಮಕ್ಕಳಿಗೆ ಇಬ್ಬರು ತಂದೆಯರು; ನಿಜಕ್ಕೂ ಹೇಗೆಲ್ಲಾ ಆಗುತ್ತಾ?

ಒಂದೇ ತಾಯಿಗೆ ಹುಟ್ಟಿದ ಅವಳಿ ಮಕ್ಕಳಿಗೆ ಇಬ್ಬರು ತಂದೆಯರು; ನಿಜಕ್ಕೂ ಹೇಗೆಲ್ಲಾ ಆಗುತ್ತಾ?

- Advertisement -
- Advertisement -

ಬ್ರೆಜಿಲ್; 19 ವರ್ಷದ ಯುವತಿಯೊಬ್ಬಳು ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಮಕ್ಕಳ ಜನನದ ಬಳಿಕ ಅಚ್ಚರಿಯ ವಿಚಾರವೊಂದು ಬಯಲಾಗಿದೆ.

ಬ್ರೆಜಿಲ್ ನ ಯುವತಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆದರೆ ಆ ಮಕ್ಕಳಿಗೆ ತಂದೆ ಮಾತ್ರ ಬೇರೆ ಬೇರೆ. ಇದು ಹೇಗೆ ಸಾಧ್ಯ ಅಂತಾ ನೋಡಿದಾಗ ಶಾಕಿಂಗ್ ವಿಚಾರವೊಂದು ಹೊರ ಬಿದ್ದಿದೆ.

ಅಂದ್ಹಾಗೆ ಇಂತಹ ಘಟನೆಗಳು ನಡೆಯೋದು ಒಂದು ಮಿಲಿಯನ್ ನಲ್ಲಿ ಒಂದು ಮಾತ್ರ ಅಂತಾ ವೈದ್ಯರು ಹೇಳಿದ್ದಾರೆ. ಯುವತಿ ಒಂದೇ ದಿನದಲ್ಲಿ ಇಬ್ಬರು ಪುರುಷರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದರಿಂದ ಹೀಗೆ ಬೇರೆ ಬೇರೆ ವ್ಯಕ್ತಿಗಳಿಂದ ಒಟ್ಟಿಗೆ ಅವಳಿ ಮಕ್ಕಳು ಹುಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಋತುಚಕ್ರ ಮುಗಿದ ಕೆಲವೇ ದಿನಗಳಲ್ಲಿ ಒಂದೇ ದಿನ ಇಬ್ಬರು ವ್ಯಕ್ತಿಗಳೊಂದಿಗೆ ಆಕೆ  ಲೈಂಗಿಕ ಸಂಪರ್ಕ ಹೊಂದಿದ ಕಾರಣ ಈ ರೀತಿ ಘಟನೆ ಸಂಭವಿಸಿದೆ ಎಂದಿದ್ದಾರೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಹೆಟೆರೊಪಟರ್ನಲ್ ಸೂಪರ್‌ಫೆಕಂಡೇಶನ್ (Heteropaternal Superfecundation) ಎಂದು ಕರೆಯಲಾಗುತ್ತದೆ. ಪ್ರಪಂಚದಲ್ಲಿ ಇಲ್ಲಿಯವರೆಗೆ 20 ಮಂದಿಯಲ್ಲಿ ಈ ರೀತಿಯ ಘಟನೆಗಳು ನಡೆದಿವೆ ಎನ್ನಲಾಗಿದೆ.

ಇನ್ನು ಮಕ್ಕಳು ಹುಟ್ಟಿದಾಗ ಆಕೆಗೆ ಈ ವಿಷಯ ತಿಳಿದಿರಲಿಲ್ಲ. ಅವರ ಮೊದಲ ಹುಟ್ಟುಹಬ್ಬದ ಸಮಯದಲ್ಲಿ ಆಕೆಗೆ ಈ ಮಕ್ಕಳ ತಂದೆ ಯಾರು ಎಂದು ನೋಡುವ ಹಂಬಲವಾಗಿದೆ. ಆದ್ದರಿಂದ ಆಕೆ ಡಿಎನ್​ಎ ಪರೀಕ್ಷೆ ಮಾಡಿಸಿದ್ದಾಳೆ. ಆದರೆ ವೈದ್ಯರಿಗೇ ಅಚ್ಚರಿ ಎನ್ನುವಂತೆ ಇಬ್ಬರು ಮಕ್ಕಳ ಡಿಎನ್​ಎ ಪರೀಕ್ಷೆ ಬೇರೆ ಬೇರೆ ರೀತಿ ಬಂದಿದೆ.ಆಗ ಮಕ್ಕಳ ತಂದೆ ಬೇರೆ ಬೇರೆ ಅಂತಾ ಗೊತ್ತಾಗಿದೆ.

ನಂತರ ವೈದ್ಯರು ಯುವತಿಯ ಬಳಿ ಚರ್ಚಿಸಿದಾಗ ತಾನು ಒಂದೇ ದಿನ ಇಬ್ಬರ ಜತೆ ಲೈಂಗಿಕ ಸಂಪರ್ಕ ಹೊಂದಿರುವ ಬಗ್ಗೆ ತಿಳಿಸಿದ್ದಾಳೆ. ಈ ಸುದ್ದಿ ಇದೀಗ ಭಾರಿ ವೈರಲ್​ ಆಗಿದೆ. ಆಶ್ಚರ್ಯಕರ ಸಂಗತಿ ಬೆಳಕಿಗೆ ಬಂದಿದಂತೂ ನಿಜ

- Advertisement -

Latest News

error: Content is protected !!