Friday, June 5, 2026
Homeಕರಾವಳಿಉಡುಪಿಕುಂದಾಪುರ: ಮನೆಯಂಗಳದಲ್ಲಿದ್ದ ನಾಯಿಯನ್ನ ಎಳೆದೊಯ್ದ ಚಿರತೆ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ಕುಂದಾಪುರ: ಮನೆಯಂಗಳದಲ್ಲಿದ್ದ ನಾಯಿಯನ್ನ ಎಳೆದೊಯ್ದ ಚಿರತೆ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ

- Advertisement -
- Advertisement -

ಕುಂದಾಪುರ: ಮನೆಯಂಗಳದಲ್ಲಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದ ಘಟನೆ ತೆಕ್ಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಸುರೇಶ್ ದೇವಾಡಿಗ ಎನ್ನುವರ ಮನೆಯಲ್ಲಿದ್ದ ಸಾಕು ನಾಯಿಯನ್ನು ನಿನ್ನೆ ರಾತ್ರಿ ಚಿರತೆ ಎಳೆದೊಯ್ದಿದೆ. ಚಿರತೆ ಸಂಚಾರವಿರುವ ಮಾಲಾಡಿ ತೋಟದ ಬಳಿಯೇ ಸರಕಾರಿ ಶಾಲೆ, ಅಂಗನವಾಡಿ, ದೇವಸ್ಥಾನ ವಸತಿ ಪ್ರದೇಶವಿದ್ದು ಆಸುಪಾಸಿನಲ್ಲಿ 50ಕ್ಕೂ ಅಧಿಕ ಮನೆಗಳಿದೆ. ನಿರಂತರವಾಗಿ ಚಿರತೆ ಕಾಟದಿಂದ ಇಲ್ಲಿನ ಜನರು ಭಯಭೀತರಾಗಿದ್ದಾರೆ.

- Advertisement -

Latest News

error: Content is protected !!