Thursday, June 4, 2026
Homeಕರಾವಳಿಉಡುಪಿಕುಂದಾಪುರ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ: 4 ಲಾರಿ, 8 ಮೆಟ್ರಿಕ್ ಟನ್ ಮರಳು, ಕೆಂಪುಕಲ್ಲು...

ಕುಂದಾಪುರ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ: 4 ಲಾರಿ, 8 ಮೆಟ್ರಿಕ್ ಟನ್ ಮರಳು, ಕೆಂಪುಕಲ್ಲು ವಶ

- Advertisement -
- Advertisement -

ಕುಂದಾಪುರ: ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ದಾಳಿ ನಡೆದಿದ್ದು, 4 ಲಾರಿ ಸಹಿತ 8 ಮೆಟ್ರಿಕ್ ಟನ್ ಮರಳು ವಶಕ್ಕೆ ಪಡೆಯಲಾಗಿದೆ.

ಸಾರ್ವಜನಿಕರ ಮಾಹಿತಿ ಮೇರೆಗೆ ಭೂ ವಿಜ್ಞಾನಿ ಸಂಧ್ಯಾ ಅವರು ಹಕ್ಲಾಡಿ ಗ್ರಾಮದ ಬಟ್ಟೆಕುದ್ರು ಪರಿಸರದ ಚಕ್ರ ನದಿಯಲ್ಲಿ ಮುಂಜಾನೆ 5.30ಕ್ಕೆ ದಾಳಿ ನಡೆಸಿ 8 ಮೆಟ್ರಿಕ್ ಟನ್ ಮರಳು ಸಹಿತ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಕುಂದಾಪುರ ತಾಲೂಕು ಆಲೂರು ಗ್ರಾಮದಲ್ಲಿನ ಅನಧಿಕೃತ ಕೆಂಪುಕಲ್ಲು ಕ್ವಾರಿಗಳಿಂದ ಕೆಂಪು ಕಲ್ಲು ಸಾಗಣೆ ಮಾಡುತ್ತಿದ್ದ ಮೂರು ಲಾರಿ ಮತ್ತು 14 ಮೆಟ್ರಿಕ್ ಟನ್ ಕೆಂಪುಕಲ್ಲುಗಳನ್ನು ಹೊಸಾಡು ಗ್ರಾಮದ ಬಂಟ್ವಾಡಿ ಪರಿಸರದಲ್ಲಿ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ.

- Advertisement -

Latest News

error: Content is protected !!