Wednesday, June 3, 2026
Homeಕರಾವಳಿಜೆಡಿಎಸ್ ರಾಜ್ಯ ವಕ್ತಾರರಾಗಿ ಎಂಎಲ್ಸಿ ಬಿ.ಎಂ. ಫಾರೂಕ್ ಮತ್ತು ಸುಳ್ಯದ ಎಂ.ಬಿ. ಸದಾಶಿವ ನೇಮಕ

ಜೆಡಿಎಸ್ ರಾಜ್ಯ ವಕ್ತಾರರಾಗಿ ಎಂಎಲ್ಸಿ ಬಿ.ಎಂ. ಫಾರೂಕ್ ಮತ್ತು ಸುಳ್ಯದ ಎಂ.ಬಿ. ಸದಾಶಿವ ನೇಮಕ

- Advertisement -
- Advertisement -

ಬೆಂಗಳೂರು: ಜೆಡಿಎಸ್ ಪಕ್ಷದ ರಾಜ್ಯಮಟ್ಟದ ಮತ್ತು ಜಿಲ್ಲಾಮಟ್ಟದ ಮಾಧ್ಯಮ ವಕ್ತಾರರನ್ನು ನೇಮಿಸಲಾಗಿದೆ.

ಹಾಲಿ ಶಾಸಕರು, ಸಂಸದರು, ಮಾಜಿ ಶಾಸಕರನ್ನೊಳಗೊಂಡಂತೆ ಒಟ್ಟು‌ 62 ಜನರನ್ನು ರಾಜ್ಯ ವಕ್ತಾರರನ್ನಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಆದೇಶ ಹೊರಡಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಮತ್ತು ಸುಳ್ಯದ ಎಂ.ಬಿ. ಸದಾಶಿವ ಅವರನ್ನು ರಾಜ್ಯ ವಕ್ತಾರರನ್ನಾಗಿ ನೇಮಿಸಲಾಗಿದೆ.

ದಕ್ಷಿಣ ಕನ್ನಡ‌ ಜಿಲ್ಲಾ ವಕ್ತಾರರಾಗಿ ಮಂಗಳೂರಿನ ಸುಶೀಲ್ ನರೋನ ಮತ್ತು ಅಕ್ಷಿತಾ ಸುವರ್ಣ ನೇಮಕಗೊಂಡಿದ್ದಾರೆ.

ಉಡುಪಿ ಜಿಲ್ಲಾ ವಕ್ತಾರರನ್ನಾಗಿ ಉಡುಪಿಯ ವಾಸುದೇವ ರಾವ್ ಮತ್ತು ಹೆಬ್ರಿಯ ಶ್ರೀಕಾಂತ ಪೂಜಾರಿ ಅವರನ್ನು ನೇಮಿಸಲಾಗಿದೆ.

- Advertisement -

Latest News

error: Content is protected !!