Wednesday, June 3, 2026
Homeಕರಾವಳಿಮಂಗಳೂರಿನಲ್ಲಿ ಲಾರಿ ಡಿಕ್ಕಿ ಹೊಡೆದು ಪಾದಾಚಾರಿ ಸಾವು

ಮಂಗಳೂರಿನಲ್ಲಿ ಲಾರಿ ಡಿಕ್ಕಿ ಹೊಡೆದು ಪಾದಾಚಾರಿ ಸಾವು

- Advertisement -
- Advertisement -

ಮಂಗಳೂರು;ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲ್ಲಾಪು ಮಾರುಕಟ್ಟೆ ಬಳಿ ನಡೆದಿದೆ. ಬೆಂಗೆರೆ ನಿವಾಸಿ ನಿಜಾಮುದ್ದೀನ್(48)ಮೃತ ದುರ್ದೈವಿ.

ಕಲ್ಲಾಪು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ನಿಜಾಮುದ್ದೀನ್, ಇಂದು ಬೆಳಗ್ಗಿನ ಜಾವ 4.10ರ ಸುಮಾರಿಗೆ ಮನೆಯಿಂದ ನಡೆದುಕೊಂಡು ಹೋಗುತ್ತಿದ್ದಾಗ ಮೀನಿನ ಲಾರಿಯೊಂದು ಢಿಕ್ಕಿ ಹೊಡೆದಿದೆ. ಲಾರಿಯ ಟೈಯರ್ ಸ್ಫೋಟಗೊಂಡು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಸಂಬಂಧ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!