Thursday, June 4, 2026
Homeಕರಾವಳಿಬಸ್ ನಿಂದ ಬಿದ್ದು ಗಾಯಗೊಂಡ ವೃದ್ಧ

ಬಸ್ ನಿಂದ ಬಿದ್ದು ಗಾಯಗೊಂಡ ವೃದ್ಧ

- Advertisement -
- Advertisement -

ಮಂಗಳೂರು: ಬಸ್ ನಿಂದ ಬಿದ್ದು ವೃದ್ಧ ಗಾಯಗೊಂಡ ಘಟನೆ ನಗರದ ರಾ.ಹೆ.66ರ ಜೆಪ್ಪಿನಮೊಗರು ಮಹಾಕಾಳಿಪಡ್ಪು ಕ್ರಾಸ್ ಬಳಿ ನಡೆದಿದೆ.

ತೊಕ್ಕೊಟ್ಟುವಿನಿಂದ ಜೆಪ್ಪಿನಮೊಗರು ಮಹಾಕಾಳಿಪಡ್ಪು ಕ್ರಾಸ್ ಕಡೆಗೆ ರೂಟ್ ನಂಬ್ರ 43ನೇ ಸಿಟಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಭೋಜ (76)ಗಾಯಗೊಂಡವರು.

ಇವರು ಬಸ್ಸಿನಿಂದ ಇಳಿಯುವಾಗ ಬಸ್ ಚಾಲಕ ಜಗದೀಶ್ ಎಂಬಾತನು ಬಸ್ಸನ್ನು ಏಕಾಎಕಿ ಮುಂದಕ್ಕೆ ಚಲಾಯಿಸಿದ ಪರಿಣಾಮ ಭೋಜ ಅವರು ಬಿದ್ದು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಚಾಲಕನ ವಿರುದ್ಧ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!