Thursday, June 4, 2026
Homeತಾಜಾ ಸುದ್ದಿಬಂಧನವಾದ ಬೆನ್ನಲ್ಲೇ ಮುರುಘಾ ಶ್ರೀಗಳಿಗೆ ಕಾಣಿಸಿಕೊಂಡ ಎದೆನೋವು;  ಚಿತ್ರದುರ್ಗದ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ  ಚಿಕಿತ್ಸೆ

ಬಂಧನವಾದ ಬೆನ್ನಲ್ಲೇ ಮುರುಘಾ ಶ್ರೀಗಳಿಗೆ ಕಾಣಿಸಿಕೊಂಡ ಎದೆನೋವು;  ಚಿತ್ರದುರ್ಗದ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ  ಚಿಕಿತ್ಸೆ

- Advertisement -
- Advertisement -

ಚಿತ್ರದುರ್ಗ; ನಿನ್ನೆ ಪೊಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀಗಳನ್ನು ಬಂಧಿಸಿಅವರಿಗೆ14ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿತ್ತು.  ಇದರ ಬೆನ್ನಲ್ಲೇ ಮರುಘಾಮಠದ ಶ್ರೀಗಳಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು,  ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀಗಳನ್ನು ಜೈಲಿನಿಂದ ಆಸ್ಪತ್ರೆಗೆ ರವಾನಿಸಲಾಗಿದೆ.

ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಮೂವರು ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದ್ದು, ಬಳಿಕ ಇಸಿಜಿ ಟೆಸ್ಟ್‌ ಮಾಡಲಾಗಿದೆ. ಇಸಿಜಿಟೆಸ್ಟ್‌ ಮಾಡಿದ್ದೇವೆ. ಸದ್ಯ ಶ್ರೀಗಳನ್ನು ಜಿಲ್ಲಾಸ್ಪತ್ರೆಯ ಐಸಿಯು ವಿಭಾಗಕ್ಕೆ ಶಿಫ್ಟ್ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಸ್ಪತ್ರೆಯ‌ ಸರ್ಜನ್‌ ಡಾ.ಸಾಲಿಮಂಜಪ್ಪ‌‌ ಹೇಳಿದ್ದಾರೆ.

- Advertisement -

Latest News

error: Content is protected !!