Thursday, June 4, 2026
Homeತಾಜಾ ಸುದ್ದಿಮಂಗಳೂರು: ಅಪಘಾತಕ್ಕೀಡಾದ ಬೀಡಿ ವರ್ಕರ್‌ಗೆ ಎಚ್.ಎಂ.ಎಸ್.ಬೀಡಿ ಯೂನಿಯನ್ ವತಿಯಿಂದ ಚಿಕಿತ್ಸೆಗೆ ನೆರವು

ಮಂಗಳೂರು: ಅಪಘಾತಕ್ಕೀಡಾದ ಬೀಡಿ ವರ್ಕರ್‌ಗೆ ಎಚ್.ಎಂ.ಎಸ್.ಬೀಡಿ ಯೂನಿಯನ್ ವತಿಯಿಂದ ಚಿಕಿತ್ಸೆಗೆ ನೆರವು

- Advertisement -
- Advertisement -

ಮಂಗಳೂರು: ಇತ್ತೀಚೆಗೆ ಅಪಘಾತಕ್ಕೀಡಾಗಿ ತನ್ನ ಎಡ ಕೈಯನ್ನು ಕಳೆದುಕೊಂಡು ನಗರದ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಳೆಪುಣಿ ಗ್ರಾಮ ಪಂಚಾಯತ್ ಸದಸ್ಯೆ ಹಾಗೂ ಬೀಡಿ ಕಾರ್ಮಿಕರಾಗಿರುವ ಸೆಮೀಮ ಅವರಿಗೆ ಎಚ್.ಎಂ.ಎಸ್ ಯೂನಿಯನ್ ವತಿಯಿಂದ ರೂ.30 ಸಾವಿರ ಆರ್ಥಿಕ ನೆರವು ನೀಡಲಾಯಿತು.

ಮಂಗಳೂರಿನ ಚಿತ್ತಾರ ಬಳಗದ ಮನವಿಗೆ ಸ್ಪಂದಿಸಿದ ಕರ್ನಾಟಕ ಕರಾವಳಿ ಬೀಡಿ ವರ್ಕರ್ಸ್ ಯೂನಿಯನ್ ಮತ್ತು  ಸೌತ್ ಕೆನರಾ ಮತ್ತು ಉಡುಪಿ ಜಿಲ್ಲಾ ಬೀಡಿ ಕಂಟ್ರಾಕ್ಟರ್ಸ್ ಯೂನಿಯನ್ ಪದಾಧಿಕಾರಿಗಳು ಆಸ್ಪತ್ರೆಗೆ ಬಂದು ಸೆಮೀಮ ಅವರಿಗೆ ನೆರವಿನ ಮೊತ್ತದ ಚೆಕ್ ಹಸ್ತಾಂತರಿಸಿದರು.

ಯೂನಿಯನ್ ರಾಜ್ಯ ಘಟಕದ ಅಧ್ಯಕ್ಷ ಎಂ.ಸುರೇಶ್ಚಂದ್ರ ಶೆಟ್ಟಿ, ಜಿಲ್ಲಾಧ್ಯಕ್ಷ ಮಹಮ್ಮದ್ ರಫಿ, ಕಂಟ್ರಾಕ್ಟರ್ಸ್ ಯೂನಿಯನ್ ಅಧ್ಯಕ್ಷ ಹರೀಶ್ ಕೆ.ಎಸ್, ಕೋಶಾಧಿಕಾರಿ ಇಸ್ಮಾಯಿಲ್ ಡಿ.ಎಸ್ , ಸದಸ್ಯ ಸಿದ್ದಿಕ್ ಅರ್ಕಾನ,  ಹಾಗೂ ಮುಡಿಪು ಜನಶಿಕ್ಷಣ ಟ್ರಸ್ಟ್ ನ ನಿರ್ದೇಶಕರಾದ ಶೀನ ಶೆಟ್ಟಿ ಮತ್ತು ಕ್ರಷ್ಣಮೂಲ್ಯ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!