Friday, June 5, 2026
Homeಕರಾವಳಿಬೆಳ್ತಂಗಡಿ: ಆಕಸ್ಮಿಕವಾಗಿ ಬಾವಿಗೆ ಬಿದ್ದು ವ್ಯಕ್ತಿ ಸಾವು

ಬೆಳ್ತಂಗಡಿ: ಆಕಸ್ಮಿಕವಾಗಿ ಬಾವಿಗೆ ಬಿದ್ದು ವ್ಯಕ್ತಿ ಸಾವು

- Advertisement -
- Advertisement -


ಬೆಳ್ತಂಗಡಿ : ಆಕಸ್ಮಿಕವಾಗಿ ವ್ಯಕ್ತಿಯೊಬ್ಬರು ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗಾಂಧಿನಗರ ಕಾಫಿನಡ್ಕ ತೆಂಕಕಾರಂದೂರು ನಿವಾಸ ರಮಾನಂದ(42) ಆಕಸ್ಮಿಕವಾಗಿ ನಿನ್ನೆ ಮಧ್ಯಾಹ್ನ  ತಮ್ಮ ಮನೆ ಸಮೀಪದ ಬಾವಿಗೆ ಬಿದ್ದಿದ್ದಾರೆ.

ರಮಾನಂದರು ನಿನ್ನೆ ಮಧ್ಯಾಹ್ನವರೆಗೆ ಮನೆಯಲ್ಲಿ ಇದ್ದು ಬಳಿಕ ಸಂಜೆಯವರೆಗೆ ಮನೆಯಲ್ಲಿ ಕಾಣಿಸಿಕೊಂಡಿರಲಿಲ್ಲ.  ಇದರಿಂದ ಅತಂಕಗೊಂಡ ಮನೆ ಮಂದಿ ಹುಡುಗಾಟ ನಡೆಸಿದೆರೆನ್ನಲಾಗಿದೆ. ರಾತ್ರಿ ವೇಳೆ ರಮಾನಂದರ ಚಪ್ಪಲಿ ಬಾವಿ ಸಮೀಪ ಸಿಕ್ಕಿದರಿಂದ ತಕ್ಷಣ ಗ್ರಾ.ಪಂ.ಅಧ್ಯಕ್ಷರಾದ ಹೇಮಂತ ರವರು ಬೆಳ್ತಂಗಡಿ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಬಂದು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶವವನ್ನು ಮೇಲಕ್ಕೆತ್ತುವ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ  ಪ್ರಮುಖ ಅಗ್ನಿಶಾಮಕ  ಕೃಷ್ಣ.ಪಿ. ನಾಯ್ಕ,ಚಾಲಕ ಲಿಂಗರಾಜ್ ಲಮಾಣಿ,ಉಸ್ಮಾನ್,ಮಹಮ್ಮದ್ ಜಂಬಗಿ, ಅರುಣ್ ಭಾಗಿಯಾಗಿದ್ದರು.

- Advertisement -

Latest News

error: Content is protected !!