Saturday, June 6, 2026
Homeಕರಾವಳಿಉಡುಪಿಉಡುಪಿ: ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ರಿಯಾ ಶೆಟ್ಟಿಗೆ ಚಿನ್ನದ ಪದಕ

ಉಡುಪಿ: ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ರಿಯಾ ಶೆಟ್ಟಿಗೆ ಚಿನ್ನದ ಪದಕ

- Advertisement -
- Advertisement -

ಉಡುಪಿ: ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಉಡುಪಿಯ ರಿಯಾ ಶೆಟ್ಟಿಗೆ ಚಿನ್ನದ ಪದಕ ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.

ಶಿವಮೊಗ್ಗ ಓಪನ್ ಮೂರನೇ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಉಡುಪಿ ಒಳಕಾಡು ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ರಿಯಾ ಶೆಟ್ಟಿ ಕಟ ವಿಭಾಗದಲ್ಲಿ ಚಿನ್ನ‌ ಮತ್ತು  ಕುಮಿಟಿ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾಳೆ. ಈಕೆ ಉಡುಪಿ ಹಾವಂಜೆ ಗ್ರಾಮದ ಕೀಳಂಜೆಯ ಛಾಯಾಗ್ರಾಹಕ ಗಣೇಶ್ ಶೆಟ್ಟಿ ಮತ್ತು ಜಯಲಕ್ಷ್ಮೀ ಶೆಟ್ಟಿ ದಂಪತಿ ಪುತ್ರಿ. ರಿಯಾ ಶೆಟ್ಟಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಪರ್ಕಳದ ಪ್ರವೀಣ್ ಪಿ.ಕೆ.ಸಿ ಯವರ ಶಿಷ್ಯೆಯಾಗಿದ್ದಾಳೆ.

- Advertisement -

Latest News

error: Content is protected !!