Wednesday, June 3, 2026
Homeತಾಜಾ ಸುದ್ದಿಭಾರತದಲ್ಲಿ ಉಗ್ರ ದಾಳಿಗೆ ಸಂಚು: ಐಸಿಸ್​ ಆತ್ಮಾಹುತಿ ಬಾಂಬರ್ ರಷ್ಯಾದಲ್ಲಿ ಬಂಧನ

ಭಾರತದಲ್ಲಿ ಉಗ್ರ ದಾಳಿಗೆ ಸಂಚು: ಐಸಿಸ್​ ಆತ್ಮಾಹುತಿ ಬಾಂಬರ್ ರಷ್ಯಾದಲ್ಲಿ ಬಂಧನ

- Advertisement -
- Advertisement -

ಮಾಸ್ಕೋ: ಭಾರತದಲ್ಲಿ ಭಯೋತ್ಪಾದಕ ದಾಳಿಗೆ ಸಂಚು ರೂಪಿಸುತ್ತಿದ್ದ ಇಸ್ಲಾಮಿಕ್ ಸ್ಟೇಟ್(ಐಸಿಸ್​) ಭಯೋತ್ಪಾದಕ ಗುಂಪಿನ ಸದಸ್ಯನೋರ್ವನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಈ ಬಗ್ಗೆ ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.

ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿದ ಆತ್ಮಾಹುತಿ ಬಾಂಬರ್ ಅನ್ನು ತಮ್ಮ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ರಷ್ಯಾದ ಕೇಂದ್ರೀಯ ಭದ್ರತಾ ಸಂಸ್ಥೆ ಸೋಮವಾರ ಹೇಳಿದೆ.

ಈತ ಭಾರತದ ಆಡಳಿತದ ನಾಯಕರ ಮೇಲೆ ದಾಳಿಗೆ ಸಂಚು ರೂಪಿಸುತ್ತಿದ್ದ ಎಂದು ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ವರದಿ ಮಾಡಿದೆ.  ಈತ ಭಾರತದ ಸ್ಥಳೀಯರು, ಆಡಳಿತ ವಲಯದ ಪ್ರತಿನಿಧಿಗಳನ್ನು ಗುರಿಯಾಗಿರಿಸಿ ಆತ್ಮಾಹುತಿ ದಾಳಿ  ಮೂಲಕ ಭಯೋತ್ಪಾದಕ ಕೃತ್ಯವನ್ನು ಎಸಗಲು ಯೋಜಿಸಿದ್ದ ಎಂದು ಎಫ್‌ಎಸ್‌ಬಿ ಹೇಳಿಕೆಯಲ್ಲಿ ತಿಳಿಸಿದೆ. ಬಂಧಿತ ವ್ಯಕ್ತಿಯನ್ನು ಐಎಸ್ ನಾಯಕರೊಬ್ಬರು ಟರ್ಕಿಯಲ್ಲಿ ಆತ್ಮಹತ್ಯಾ ಬಾಂಬರ್ ಆಗಿ ನೇಮಿಸಿಕೊಂಡಿದ್ದರು ಎಂದು ಹೇಳಿಕೆ ತಿಳಿಸಿದೆ.

- Advertisement -

Latest News

error: Content is protected !!