Thursday, July 3, 2025
Homeತಾಜಾ ಸುದ್ದಿಬೆಳ್ತಂಗಡಿ: ಖಾಸಗಿ ಬಸ್ ಸಿಬ್ಬಂದಿ ಕುಸಿದು ಬಿದ್ದು ಸಾವು

ಬೆಳ್ತಂಗಡಿ: ಖಾಸಗಿ ಬಸ್ ಸಿಬ್ಬಂದಿ ಕುಸಿದು ಬಿದ್ದು ಸಾವು

spot_img
- Advertisement -
- Advertisement -

ಬೆಳ್ತಂಗಡಿ: ಬೆಂಗಳೂರು-ಕಾರ್ಕಳ ನಡುವೆ ರಾತ್ರಿ ಸಂಚರಿಸುವ ಖಾಸಗಿ ಸ್ಲೀಪರ್ ಬಸ್ ನ ನಿರ್ವಾಹಕರೊಬ್ಬರು ಬಸ್ ನಿಂದ ಕೆಳಗಿಳಿದ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಗುರುವಾಯನಕೆರೆ ಸಮೀಪ ಇಂದು ನಡೆದಿದೆ.

ರೆಖ್ಯಾ ಗ್ರಾಮದ ಪಳ್ಳತ್ತಡ್ಕ ನಿವಾಸಿ ಮಂಜುನಾಥ ರೈ ಮೃತ ವ್ಯಕ್ತಿ. ಕುಸಿದು ಬಿದ್ದ ಕೆಲವೇ ಕ್ಷಣದಲ್ಲಿ ಇವರನ್ನು ಗುರುವಾಯನಕೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಕಳೆದ ಹಲವು ವರ್ಷಗಳಿಂದ ಖಾಸಗಿ ಬಸ್ ಸಂಸ್ಥೆಯಲ್ಲಿ ದುಡಿಯುತ್ತಿದ್ದ ಮಂಜುನಾಥ ರೈ ಅವರೇ ತಮ್ಮ ಕುಟುಂಬಕ್ಕೆ ಆಧಾರವಾಗಿದ್ದರು. ಮೃತರು ತಾಯಿ, ಪತ್ನಿ, ಮಗಳು ಮತ್ತು ಮಗನನ್ನು ಅಗಲಿದ್ದಾರೆ.

- Advertisement -
spot_img

Latest News

error: Content is protected !!