Saturday, June 6, 2026
Homeತಾಜಾ ಸುದ್ದಿಬರೀ 20 ದಿನಗಳಲ್ಲಿ 30 ಕೋಟಿಗೂ ಹೆಚ್ಚು ಧ್ವಜಗಳ ತಯಾರಿ: 500 ಕೋಟಿ ರೂ. ರಾಷ್ಟ್ರಧ್ವಜ...

ಬರೀ 20 ದಿನಗಳಲ್ಲಿ 30 ಕೋಟಿಗೂ ಹೆಚ್ಚು ಧ್ವಜಗಳ ತಯಾರಿ: 500 ಕೋಟಿ ರೂ. ರಾಷ್ಟ್ರಧ್ವಜ ಮಾರಾಟ

- Advertisement -
- Advertisement -

ಹೊಸದಿಲ್ಲಿ: ಹರ್ ಘರ್ ತಿರಂಗಾ ಅಭಿಯಾನದಿಂದ ದೇಶದಲ್ಲಿ ದಾಖಲೆ ಮೊತ್ತದ ರಾಷ್ಟ್ರಧ್ವಜಗಳು ಮಾರಾಟವಾಗಿವೆ. ಈ ವರ್ಷ 30 ಕೋಟಿಗೂ ಹೆಚ್ಚು ಧ್ವಜಗಳು ಮಾರಾಟವಾಗುವುದರ ಮೂಲಕ 500 ಕೋಟಿ ರೂ. ವಹಿವಾಟು ಆಗಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಮಾಹಿತಿ ನೀಡಿದೆ.

ಹರ್‌ ಘರ್‌ ತಿರಂಗಾ ಅಭಿಯಾನಕ್ಕಾಗಿ ಬರೀ 20 ದಿನಗಳಲ್ಲಿ 30 ಕೋಟಿಗೂ ಹೆಚ್ಚು ಧ್ವಜಗಳನ್ನು ತಯಾರಿಸಲಾಗಿದೆ. ಇದು ಒಂದು ದಾಖಲೆಯೂ ಆಗಿದ್ದು, ಭಾರತೀಯ ಉದ್ಯಮಿಗಳ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ. 15 ದಿನಗಳಲ್ಲಿ CAIT ಮತ್ತು ದೇಶಾದ್ಯಂತ ವಿವಿಧ ಟ್ರೇಡ್ ಅಸೋಸಿಯೇಷನ್‌ಗಳು 3,000 ತಿರಂಗಾ ಕಾರ್ಯಕ್ರಮಗಳನ್ನು ಆಯೋಜಿಸಿವೆ ಎಂದು CAIT ತಿಳಿಸಿದೆ.

- Advertisement -

Latest News

error: Content is protected !!