Tuesday, July 8, 2025
Homeಕರಾವಳಿಉಪ್ಪಿನಂಗಡಿ: ಇಂದು ಜೈಲಿನಿಂದ ಬಿಡುಗಡೆಯಾದ ಕಳ್ಳ, ಇಂದೇ ಬೈಕ್ ಕದ್ದು ಸಿಕ್ಕಿ ಬಿದ್ದ..!

ಉಪ್ಪಿನಂಗಡಿ: ಇಂದು ಜೈಲಿನಿಂದ ಬಿಡುಗಡೆಯಾದ ಕಳ್ಳ, ಇಂದೇ ಬೈಕ್ ಕದ್ದು ಸಿಕ್ಕಿ ಬಿದ್ದ..!

spot_img
- Advertisement -
- Advertisement -

ಉಪ್ಪಿನಂಗಡಿ: ಇಂದು ಜೈಲಿನಿಂದ ಬಿಡುಗಡೆಯಾದ ವ್ಯಕ್ತಿಯೊಬ್ಬ ಇಂದೇ ಮಹಿಳೆಯೊಬ್ಬರ ಬೈಕ್ ಕದ್ದು ಮತ್ತೆ ಪೊಲೀಸರಿಗೆ ಸಿಕ್ಕಿ ಬಿದ್ದ ಘಟನೆ ಗುಂಡ್ಯದಲ್ಲಿ ನಡೆದಿದೆ.

ಆರೋಪಿಯನ್ನು ಉಪ್ಪಿನಂಗಡಿ ಪೋಲಿಸರ ವಶಕ್ಕೆ ಒಪ್ಪಿಸಲಾಗಿದೆ. ಆರೋಪಿ ಕಣ್ಣೂರು ಜೈಲಿನಿಂದ ಇಂದು ಬಿಡುಗಡೆಯಾಗಿದ್ದ ಎನ್ನಲಾಗಿದ್ದು, ಹಾಗೇ ಬಿಡುಗಡೆಯಾದವನು ಮಂಗಳೂರಿನಿಂದ ಬೈಕೊಂದನ್ನು ಕದ್ದು ಅದರಲ್ಲೇ ಬೆಂಗಳೂರು ಮಾರ್ಗವಾಗಿ ತೆರಳುತ್ತಿದ್ದ. ಹೀಗೆ ಹೋಗುತ್ತಿದ್ದಾಗ ಎಂಜಿರ ‘ಮಲ್ನಾಡ್’ ಡಾಬಾದ ಸಮೀಪ ಇರುವ ಪಿ.ಸಿ ಸ್ಟೋರ್ ಬಳಿ ಬೈಕ್ ನ ಪೆಟ್ರೋಲ್ ಖಾಲಿಯಾಗಿದೆ.

ಅಲ್ಲಿಂದ ಮುಂದಕ್ಕೆ ತೆರಳಲು ಪಿ.ಸಿ ಸ್ಟೋರ್ ಬಳಿ ದಿನಸಿ ಸಾಮಾನು ಖರೀದಿಸಲು ತೆರಳಿದ್ದ ನೆಲ್ಯಾಡಿಯ ಪದವಿ ಕಾಲೇಜೊಂದರ ಉಪನ್ಯಾಸಕಿಯ ಸ್ಕೂಟಿಯನ್ನು ಕದ್ದಿದ್ದಾನೆ. ಕಳ್ಳತನ ಸ್ಥಳೀಯರ ಗಮನಕ್ಕೆ ಬರುತ್ತಿದ್ದಂತೆ, ಕೂಡಲೇ ಕಾರ್ಯಪ್ರವೃತ್ತರಾದ ಸತೀಶ್ ದೇರಣೆ, ಮೋಹನ ಕರ್ತಡ್ಕ, ಕವೀಶ್ ಸಂಪಿಗೆತ್ತಡಿ ಮತ್ತು ಅವರ ಸ್ನೇಹಿತರ ಪರಿಶ್ರಮದಿಂದ ಕಳ್ಳನನ್ನು ಗುಂಡ್ಯ ಚೆಕ್ ಪೋಸ್ಟ್ ಬಳಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೂಲತಃ ಎಂಜಿರ ಪ್ರದೇಶವು ಧರ್ಮಸ್ಥಳ ಪೋಲಿಸ್ ಠಾಣಾ ವ್ಯಾಪ್ತಿಗೆ ಒಳಪಡುವುದರಿಂದ ಆರೋಪಿಯನ್ನು ಧರ್ಮಸ್ಥಳ ಪೋಲಿಸ್ ಠಾಣೆಗೆ ಉಪ್ಪಿನಂಗಡಿ ಪೋಲಿಸರು ಕರೆದೊಯ್ಯತ್ತಿದ್ದಾರೆ. ಆತ ಕ್ಷಣಕ್ಕೊಂದು ಹೆಸರು ಹೇಳುತ್ತಿದ್ದರಿಂದ ಆತನ ನಿಜವಾದ ಹೆಸರು ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

- Advertisement -
spot_img

Latest News

error: Content is protected !!