Wednesday, June 3, 2026
Homeತಾಜಾ ಸುದ್ದಿಮದುವೆಯಾದ ಮಹಿಳೆಯೊಂದಿಗೆ ಸ್ವಾಮೀಜಿ ಪರಾರಿ

ಮದುವೆಯಾದ ಮಹಿಳೆಯೊಂದಿಗೆ ಸ್ವಾಮೀಜಿ ಪರಾರಿ

- Advertisement -
- Advertisement -

ರಾಮನಗರ; ಎರಡು ವರ್ಷಗಳ ಹಿಂದಷ್ಟೇ ಸನ್ಯಾಸತ್ವ ಸ್ವೀಕರಿಸಿ ಮಠಾಧಿಪತಿಯಾಗಿದ್ದ ಸ್ವಾಮೀಜಿಯೊಬ್ಬರು ತಾವು ಪ್ರೀತಿಸಿದ ಹುಡುಗಿ ಜೊತೆ ರಾತ್ರೋರಾತ್ರಿ ಪರಾರಿಯಾಗಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರಿನಲ್ಲಿ ನಡೆದಿದೆ.

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರಿನ ಗದ್ದುಗೆ ಮಠದ ಶಿವ ಮಹಾಂತ ಸ್ವಾಮಿ ಹರೀಶ್ ನಾಪತ್ತೆಯಾಗಿರುವ ಸ್ವಾಮೀಜಿಯಾಗಿದ್ದು, ಇವರು ಅದಕ್ಕೂ ಮುನ್ನ ನನಗೆ ಸನ್ಯಾಸತ್ವ ಇಷ್ಟವಿಲ್ಲ. ಹೀಗಾಗಿ ಮಠ ಬಿಟ್ಟು ಹೋಗುತ್ತಿದ್ದೇನೆ ಎಂದು ಪತ್ರ ಬರೆದಿಟ್ಟಿದ್ದಾರೆ ಎಂದು ಹೇಳಲಾಗಿದೆ.

ಸನ್ಯಾಸತ್ವ ಸ್ವೀಕರಿಸುವ ಮುನ್ನ ಹರೀಶ್ ಎಂಬ ಈ ವ್ಯಕ್ತಿ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದ್ದು, ಆಕೆಗೆ ಒಂದೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿತ್ತು ಎಂದು ತಿಳಿದು ಬಂದಿದೆ. ಈಗ ಅದೇ ಯುವತಿಯೊಂದಿಗೆ ಸ್ವಾಮೀಜಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

- Advertisement -

Latest News

error: Content is protected !!