Wednesday, June 3, 2026
Homeಕರಾವಳಿಉಡುಪಿಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ತಿರಂಗ ಬೆಳಕಿನಿಂದ ಕಂಗೊಳಿಸಿದ ಉಡುಪಿಯ ಕನಕ ಗೋಪುರ

ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ತಿರಂಗ ಬೆಳಕಿನಿಂದ ಕಂಗೊಳಿಸಿದ ಉಡುಪಿಯ ಕನಕ ಗೋಪುರ

- Advertisement -
- Advertisement -

ಉಡುಪಿ: 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮದ ಅಂಗವಾಗಿ ಹರ್ ಘರ್ ತಿರಂಗ ಅಭಿಯಾನದ‌ ಭಾಗವಾಗಿ‌‌ ಉಡುಪಿಯ ಕನಕ ಗೋಪುರ ಕೇಸರಿ ಬಿಳಿ‌ ಹಸಿರು ಬಣ್ಣದಿಂದ ಕಂಗೊಳಿಸಿದೆ.

ಶ್ರೀಕೃಷ್ಣಮಠದ ಕನಕಗೋಪುರದಲ್ಲಿ ತ್ರಿವರ್ಣ ಬೆಳಕಿಗೆ ಕೃಷ್ಣಾಪುರ ಮಠದ ಪರ್ಯಾಯ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಚಾಲನೆ ನೀಡಿದರು. ಕೃಷ್ಣಾಪುರ ಮಠ ಮತ್ತು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್‌ ವತಿಯಿಂದ ಬೆಳಕಿನ ಆಯೋಜನೆ ಮಾಡಲಾಗಿದೆ.

ಉಡುಪಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರು ಕೂಡಾ ಕನಕ ಗೋಪುರದ ಬೆಳಕಿನ ವ್ಯವಸ್ಥೆ ನೋಡಿ ಆನಂದಿಸುತ್ತಿದ್ದಾರೆ. ಇನ್ನು ಎರಡು ದಿನ ಕೇಸರಿ,‌ಬಿಳಿ, ಹಸಿರು ಬಣ್ಣಗಳಿಂದ ಕನಕ ಗೋಪುರ ಕಂಗೊಳಿಸಲಿದೆ.

- Advertisement -

Latest News

error: Content is protected !!