Friday, June 5, 2026
Homeತಾಜಾ ಸುದ್ದಿಮಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಧಕ್ಕೆಯಲ್ಲಿ ಬೋಟ್‌ ರ‍್ಯಾಲಿಗೆ ಚಾಲನೆ

ಮಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಧಕ್ಕೆಯಲ್ಲಿ ಬೋಟ್‌ ರ‍್ಯಾಲಿಗೆ ಚಾಲನೆ

- Advertisement -
- Advertisement -

ಮಂಗಳೂರು:  ಸ್ವಾತಂತ್ರ್ಯದ ಅಮೃತ ಮಹೋತ್ಸದ ಹಿನ್ನೆಲೆಯಲ್ಲಿ ಮೀನುಗಾರಿಕಾ ಇಲಾಖೆ ಹಾಗೂ ಮೀನುಗಾರಿಕಾ ಸಂಘಗಳ ಸಹಯೋಗದಲ್ಲಿ ಮಂಗಳೂರು ಧಕ್ಕೆಯಲ್ಲಿ ಇಂದು ಫಿಶಿಂಗ್ ಬೋಟ್‌ಗಳ ರ‍್ಯಾಲಿ ನಡೆಯಿತು. ಬೋಟ್‌ಗಳ ರ‍್ಯಾಲಿಗೆ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಚಾಲನೆ ನೀಡಿದ್ರು.

ಸ್ವಾತಂತ್ರದ ಅಮೃತ ಮಹೋತ್ಸವದ ನಿಮಿತ್ತ 75 ಬೋಟ್‌ಗಳು ರಾಷ್ಟ್ರಧ್ವಜಗಳೊಂದಿಗೆ ಧಕ್ಕೆಯ ತೀರದ ನೀರಲ್ಲಿ ತೇಲುತ್ತಾ ರ‍್ಯಾಲಿಯಲ್ಲಿ ಪಾಲ್ಗೊಂಡವು.

ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ, ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಹರೀಶ್, ಉಪ ನಿರ್ದೇಶಕರಾದ ಸುಶ್ಮಿತಾ, ರೇವತಿ, ರೇಖಾ, ಕರಾವಳಿ ಕಾವಲು ಪಡೆಯ ಅಧಿಕಾರಿಗಳು, ಟ್ರಾಲ್ ಬೋಟ್ ಯೂನಿಯನ್ ಅಧ್ಯಕ್ಷ ಚೇತನ್ ಬೆಂಗ್ರೆ ಹಾಗೂ ಇತರ ಅಧಿಕಾರಿ, ಸಂಘಗಳ ಪದಾಧಿಕಾರಿಗಳು, ಬೋಟ್ ಮಾಲಕರು ಹಾಗೂ ಚಾಲಕರು ಉಪಸ್ಥಿತರಿದ್ದರು.

- Advertisement -

Latest News

error: Content is protected !!