Wednesday, June 3, 2026
Homeತಾಜಾ ಸುದ್ದಿಕೆಲಸ ಮಾಡಿಲ್ಲ ಅಂದ್ರೆ ಬೂಟಿಂದ ಹೊಡೀತೀನಿ: ದರ್ಪ ತೋರಿದ ಸಚಿವ ಉಮೇಶ್‌ ಕತ್ತಿ

ಕೆಲಸ ಮಾಡಿಲ್ಲ ಅಂದ್ರೆ ಬೂಟಿಂದ ಹೊಡೀತೀನಿ: ದರ್ಪ ತೋರಿದ ಸಚಿವ ಉಮೇಶ್‌ ಕತ್ತಿ

- Advertisement -
- Advertisement -

ವಿಜಯಪುರ: ಕೆಲಸ ಮಾಡಿದರೆ ಹೂ ಮಾಲೆ ಹಾಕ್ತೀನಿ, ಇಲ್ಲಂದ್ರೆ ಬೂಟಿನಿಂದ ಹೊಡಿತೀನಿ ಅಂತ ಸಚಿವ ಉಮೇಶ್ ಕತ್ತಿ ಲೋಕೋಪಯೋಗಿ ಇಲಾಖೆ ಎಇಇ ಮೇಲೆ ದರ್ಪದ ಮಾತುಗಳನ್ನಾಡಿದ್ದಾರೆ.

ಬುಧವಾರ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆಗೆಂದು ಉಮೆಶ್ ಕತ್ತಿ ತೆರಳಿದ್ದರು. ಈ ವೇಳೆ ನವೆಂಬರ್-ಡಿಸೆಂಬರ್ ವೇಳೆಗೆ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ ಮಾಡುತ್ತೇವೆ ಎಂದು ಕಾರ್ಯನಿರ್ವಾಹಕ ಎಇಇ ಹೇಳುತ್ತಿದ್ದಂತೆ ಏಕಾಏಕಿ ನಾಲಗೆ ಹರಿ ಬಿಟ್ಟ ಉಮೇಶ್ ಕತ್ತಿ, ನಾನು ಮಾರ್ಚ್ ತಿಂಗಳೊಳಗೆ ಕಾಮಗಾರಿ ಮುಗಿಸಿ ಎಂದಿದ್ದೇನೆ. ಡಿಸೆಂಬರ್‌ಗೆ ಕಾಮಗಾರಿ ಪೂರ್ಣವಾದರೆ ನಾನೇ ಬಂದು ಹೂ ಮಾಲೆ ಹಾಕುತ್ತೇನೆ. ಇಲ್ಲದೇ ಹೋದರೆ ಬೂಟಿನಿಂದಲೇ ಹೊಡೆಯುತ್ತೇನೆ, ಈ ರೀತಿ ಕಾಂಪ್ರಮೈಸ್ ಇದೆ ಎಂದು ಕತ್ತಿ ಮಾತನಾಡಿದ್ದಾರೆ.

- Advertisement -

Latest News

error: Content is protected !!