Thursday, June 4, 2026
Homeಕರಾವಳಿಸುಳ್ಯ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿಗಳ ಬಂಧನ: ಪ್ರವೀಣ್ ಕುಟುಂಬಸ್ಥರು ಹೇಳಿದ್ದೇನು?

ಸುಳ್ಯ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿಗಳ ಬಂಧನ: ಪ್ರವೀಣ್ ಕುಟುಂಬಸ್ಥರು ಹೇಳಿದ್ದೇನು?

- Advertisement -
- Advertisement -

ಸುಳ್ಯ: : ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಇಂದು ಬಂಧಿಸಿಲಾಗಿದೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 10 ಆರೋಪಿಗಳನ್ನು ಬಂಧಿಸಿದಂತಾಗಿದೆ.ಇನ್ನು ಆರೋಪಿಗಳನ್ನು ಬಂಧಿಸಿರುವುದಕ್ಕೆ  ಪ್ರವೀಣ್ ಮನೆಯವರು ಪೊಲೀಸ್ ಇಲಾಖೆಗೆ ಧನ್ಯವಾದ ತಿಳಿಸಿದ್ದಾರೆ.

ಪ್ರವೀಣ್‌ ಹತ್ಯೆಯಾದ ದಿನದಂದು ಕುಟುಂಬಸ್ಥರು, ತನ್ನ ಮಗನ ಕಾರ್ಯಮುಗಿಯುವುದರೊಳಗೆ ಹಂತಕರನ್ನು ಹೆಡೆಮುರಿಕಟ್ಟುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದರು. ಹತ್ಯೆಯಾದ 16 ದಿನಗಳಲ್ಲಿ ಪ್ರಮುಖ ಆರೋಪಿಗಳು ಸೇರಿ 10 ಆರೋಪಿಗಳನ್ನು ಬಂಧಿಸಿದ್ದಾರೆ. ಇದಕ್ಕಾಗಿ ಪ್ರವೀಣ್ ನೆಟ್ಟಾರು ಮನೆಯವರು ಪೊಲೀಸ್ ಇಲಾಖೆಗೆ ಧನ್ಯವಾದ ತಿಳಿಸಿದ್ದಾರೆ.

ಹಂತಕರನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು. ಜಾಮೀನು ಕೊಡಬಾರದು. ಅವರ ಪರವಾಗಿ ಯಾವುದೇ ವಕೀಲರೂ ವಾದ ಮಂಡಿಸಬಾರದು ಎಂದು ಹೆತ್ತವರು ಮನವಿ ಮಾಡಿದ್ದಾರೆ.ಪ್ರವೀಣ್‌ ತಾಯಿ ರತ್ನಾವತಿ ಮಾತನಾಡಿ, ಬೆಳ್ಳಾರೆ ಠಾಣಾ ಪೊಲೀಸರು ಎಚ್ಚೆತ್ತುಕೊಂಡಿದ್ದರೆ ನನ್ನ ಮಗನ ಹತ್ಯೆಯಾಗುತ್ತಿರಲ್ಲಿಲ್ಲ. ನನ್ನ ಪುತ್ರನ ಸ್ಥಿತಿ ಇನ್ಯಾರಿಗೂ ಬಾರದಿರಲಿ ಎಂದು ಕಣ್ಣೀರು ಹಾಕಿದ್ದಾರೆ.

- Advertisement -

Latest News

error: Content is protected !!