Friday, June 5, 2026
Homeಕರಾವಳಿಕಾಸರಗೋಡುಕಾಸರಗೋಡಿನಲ್ಲೊಂದು ಅಪರೂಪದ ವಿವಾಹ: ವರನಿಂದ ವೇದಿಕೆಯಲ್ಲೇ ಮಹರ್ ಪಡೆದ ವಧು 

ಕಾಸರಗೋಡಿನಲ್ಲೊಂದು ಅಪರೂಪದ ವಿವಾಹ: ವರನಿಂದ ವೇದಿಕೆಯಲ್ಲೇ ಮಹರ್ ಪಡೆದ ವಧು 

- Advertisement -
- Advertisement -

ಕಾಸರಗೋಡು: ಅಪರೂಪದ ವಿವಾಹವೊಂದಕ್ಕೆ ಕಾಸರಗೋಡು ಸಾಕ್ಷಿಯಾಗಿದೆ. ವಿವಾಹ ಸಮಾರಂಭವೊಂದರಲ್ಲಿ  ವಧು, ವರನಿಂದ ನೇರವಾಗಿ ‘ಮಹರ್’ ಸ್ವೀಕರಿಸಿದ್ದಾಳೆ‌.

ಮುಸ್ಲಿಂ ಸಮುದಾಯದ ಮದುವೆಯಲ್ಲಿ ವಧುವಿನ ತಂದೆ ‘ಮಹರ್‌’ (ವಧುವಿನ ಉಡುಗೊರೆ) ಸ್ವೀಕರಿಸುವುದು ಸಾಮಾನ್ಯ. ಮಗಳ ಒಪ್ಪಿಗೆ ಪಡೆದು ಮನೆಯಿಂದ ನಿಕಾಹ್ ವೇದಿಕೆಗೆ ಬಂದು ತಂದೆ, ನಿಕಾಹ್ ನಡೆದ ನಂತರ ವರನಿಂದ ‘ಮಹರ್‌’ ಸ್ವೀಕರಿಸುತ್ತಾರೆ.

ಆದರೆ ಕುಟ್ಯಾಡಿಯ ವಧುವೊಬ್ಬಳು ನೇರವಾಗಿ ನಿಕಾಹ್ ವೇದಿಕೆಗೆ ಬಂದು ಚೆರುವಕ್ಕೂರ್ ನ ವರನ ಕೈಯಿಂದ ನಿಕಾಹ್ ವೇದಿಕೆಯಲ್ಲೇ ಮಹರ್‌ ಸ್ವೀಕರಿಸಿದ್ದಾಳೆ. ಕುಟ್ಯಾಡಿ ಪಾಲೇರಿ ಪರಕ್ಕಡವು ಜುಮಾ ಮಸೀದಿಯಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಇಂತಹದ್ದೊಂದು ಅಪರೂಪದ ಘಟನೆ ನಡೆದಿದೆ.

- Advertisement -

Latest News

error: Content is protected !!