Wednesday, June 3, 2026
Homeತಾಜಾ ಸುದ್ದಿರಾಹುಲ್ ಗಾಂಧಿಗೆ ಲಿಂಗ ದೀಕ್ಷೆ ನೀಡಿದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು

ರಾಹುಲ್ ಗಾಂಧಿಗೆ ಲಿಂಗ ದೀಕ್ಷೆ ನೀಡಿದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು

- Advertisement -
- Advertisement -

ಚಿತ್ರದುರ್ಗ:  ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಇಂದು ಬೆಳಗ್ಗೆ ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿ ಡಾ.ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಪಡೆದರು.ಬೆಳಗ್ಗೆ 11 ಗಂಟೆಯ ಬಳಿಕ ಮಠಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಮುರುಘಾ ಶರಣರು, ಲಿಂಗದೀಕ್ಷೆ ನೀಡಿ ಆಶೀರ್ವದಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ರಾಹುಲ್​ ಗಾಂಧಿ, ಲಿಂಗ ದೀಕ್ಷೆ ಬಗ್ಗೆ ಆಸಕ್ತಿ ಇದ್ದು, ಇದರ ಬಗ್ಗೆ ಮಾಹಿತಿ ಇರುವವರ ಬಳಿ ತಿಳಿದುಕೊಳ್ಳುವೆ ಎಂದರು.ಪರಸ್ಪರ ಉಭಯ ಕುಶಲೋಪರಿ ನಡೆಸಿದ ಬಳಿಕ ರಾಹುಲ್​ ಗಾಂಧಿ ಅವರು ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದರು. ಈ ವೇಳೆ ಕೆ.ಸಿ.ವೇಣುಗೋಪಾಲ್​ ಹಾಗೂ ಡಿ.ಕೆ.ಶಿವಕುಮಾರ್ ಮತ್ತಿತರ ಗಣ್ಯರು ಸಾಥ್ ನೀಡಿದರು.

- Advertisement -

Latest News

error: Content is protected !!