Friday, June 5, 2026
Homeಕರಾವಳಿಉಳ್ಳಾಲದಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆಗೆ ಯತ್ನವಾಗಿದೆ ಅನ್ನೋದು ಸುಳ್ಳು : ಮಂಗಳೂರು ಪೊಲೀಸ್ ಕಮೀಷನರ್...

ಉಳ್ಳಾಲದಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆಗೆ ಯತ್ನವಾಗಿದೆ ಅನ್ನೋದು ಸುಳ್ಳು : ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಸ್ಪಷ್ಟನೆ

- Advertisement -
- Advertisement -

ಮಂಗಳೂರು: ಉಳ್ಳಾಲದಲ್ಲಿ ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆಯಾಗಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ.ಆದರೆ ಇದು ಸುಳ್ಳು ಎಂದು ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ಹೇಳಿದ್ದಾರೆ.

ನಾನು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದೇನೆ. ಅಲ್ಲದೇ ಯಾರ ಮೇಲೆ ಹಲ್ಲೆಗೆ ಯತ್ನ ನಡೆದಿದೆ ಎಂದು ಹೇಳಲಾಗಿತ್ತೋ ಆ ಯುವಕನ ಜೊತೆ ನಾನು ಮಾತನಾಡಿದ್ದೇನೆ. ಆತ ನನ್ನ ಮೇಲೆ ಹಲ್ಲೆಯಾಗಬಹುದು ಎಂಬ ಭ್ರಮೆಯಿಂದ ಆ ರೀತಿ ಹೇಳಿದ್ದಾನೆಯೋ ಹೊರತು ಬೇರೇನೂ ಆಗಿಲ್ಲ.ಆತನ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!