Friday, June 5, 2026
Homeತಾಜಾ ಸುದ್ದಿಸುಬ್ರಹ್ಮಣ್ಯ ಮನೆ ಮೇಲೆ ಗುಡ್ಡ ಕುಸಿದು ಮಕ್ಕಳಿಬ್ಬರು ಸಾವು ಪ್ರಕರಣ:  ಮೃತ ಮಕ್ಕಳ ಕುಟುಂಬಕ್ಕೆ ಸರ್ಕಾರದ...

ಸುಬ್ರಹ್ಮಣ್ಯ ಮನೆ ಮೇಲೆ ಗುಡ್ಡ ಕುಸಿದು ಮಕ್ಕಳಿಬ್ಬರು ಸಾವು ಪ್ರಕರಣ:  ಮೃತ ಮಕ್ಕಳ ಕುಟುಂಬಕ್ಕೆ ಸರ್ಕಾರದ ವತಿಯಿಂದ  11 ಲಕ್ಷ ಪರಿಹಾರ ನೀಡಿದ ಸಚಿವ ಎಸ್. ಅಂಗಾರ

- Advertisement -
- Advertisement -

ಸುಬ್ರಮಣ್ಯ: ನಿನ್ನೆ ಇಲ್ಲಿ ಪರ್ವತಮುಖಿಯಲ್ಲಿ ಮನೆ ಮೇಲೆ ಗುಡ್ಡ ಕುಸಿದು ಸಾವನ್ನಪ್ಪಿದ ಇಬ್ಬರು ಮಕ್ಕಳ ಹೆತ್ತವರಿಗೆ ಸರ್ಕಾರದ ವತಿಯಿಂದ 11 ಲಕ್ಷ 5 ಸಾವಿರ ಮೊತ್ತದ ಒಟ್ಟು 3 ಚೆಕ್ ನ್ನು ಸಚಿವ ಎಸ್. ಅಂಗಾರ ವಿತರಿಸಿದರು. ಮಕ್ಕಳ ತಂದೆ ಕುಸುಮಾಧರಿಗೆ ಅವರ ತಂದೆ ಬೊಮ್ಮಣ ಗೌಡ ಕರಿಮಜಲು ಅವರ ನಿವಾಸದಲ್ಲಿ ವಿತರಿಸಿದರು.

ಮೃತಪಟ್ಟ ಇಬ್ಬರು‌ ಮಕ್ಕಳಿಗಾಗಿ ಸರಕಾರದಿಂದ ತಲಾ 5 ಲಕ್ಷದಂತೆ ಹಾಗೂ‌ ಮನೆ ನಾಶಕ್ಕಾಗಿ ಸರಕಾರ ನೀಡುವ ರೂ. 95ಸಾವಿರದ 100 ಹಾಗೂ ಮನೆಯೊಳಗಿದ್ದ ವಸ್ತುಗಳು ನಾಶವಾಗಿರುವುದಕ್ಕೆ ಸರಕಾರದಿಂದ ಕೊಡ ಮಾಡುವ ರೂ. 10 ಸಾವಿರ ಹೀಗೆ ಒಟ್ಟು 11 ಲಕ್ಷ 5 ಸಾವಿರದ 100 ರೂ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷ ವೆಂಕಟ್ ವಳಲಂಬೆ, ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮುಳಿಯ ಕೇಶವ ಭಟ್, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕಡಬ ತಹಶಿಲ್ದಾರ್ ಅನಂತ ಶಂಕರ, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯೆ ಭಾರತಿ ದಿನೇಶ್, ಸುಬ್ರಹ್ಮಣ್ಯ ಐನೆಕಿದು ಸಹಕಾರಿ ಸಂಘದ ನಿರ್ದೇಶಕ ವೆಂಕಟೇಶ್ ಹೆಚ್.ಎಲ್., ಸುಬ್ರಹ್ಮಣ್ಯದ ಉದ್ಯಮಿ ರವಿ ಕಕ್ಕೆಪದವು,  ಮತ್ತಿತರರು ಉಪಸ್ಥಿತರಿದ್ದರು.

- Advertisement -

Latest News

error: Content is protected !!