Sunday, June 7, 2026
Homeಕರಾವಳಿಫಾಜಿಲ್ ಕೊಲೆಗೆ ಬಳಕೆಯಾಗಿದ್ದ ಕಾರು ಸುರತ್ಕಲ್ ಪೊಲೀಸರಿಂದ ಸ್ಥಳಾಂತರ

ಫಾಜಿಲ್ ಕೊಲೆಗೆ ಬಳಕೆಯಾಗಿದ್ದ ಕಾರು ಸುರತ್ಕಲ್ ಪೊಲೀಸರಿಂದ ಸ್ಥಳಾಂತರ

- Advertisement -
- Advertisement -

ಕಾರ್ಕಳ: ಸುರತ್ಕಲ್ ನಲ್ಲಿ ಫಾಜಿಲ್ ಹತ್ಯೆಗೆ ಬಳಕೆಯಾಗಿದ್ದ ಕಾರನ್ನು ಪೊಲೀಸರು ಸ್ಥಳಾಂತರ ಮಾಡಿದ್ದಾರೆ. ಕಾರ್ಕಳ ತಾಲೂಕಿನ ಕಾಂಜರ ಕಟ್ಟೆಯ ಕಡಕುಂಜ ಎಂಬಲ್ಲಿ ಪತ್ತೆಯಾಗಿದ್ದ ಇಯಾನ್ ಕಾರು ಕಳೆದ ಎರಡು ದಿನಗಳಿಂದ ನಿರ್ಜನ ಪ್ರದೇಶದಲ್ಲಿ ನಿಂತಿತ್ತು.

ಟೋಯಿಂಗ್ ವಾಹನದ ಮೂಲಕ ಸುರತ್ಕಲ್ ಪೊಲೀಸರು ಕಾರು ಸ್ಥಳಾಂತರ ಮಾಡಿದ್ದು, ವಿಧಿ ವಿಜ್ಞಾನ ತಜ್ಞರನ್ನು ಸುರತ್ಕಲ್ ಪೊಲೀಸ್ ಠಾಣೆಗೆ ಕರೆಸಿಕೊಳ್ಳಲಿದ್ದಾರೆ.

ಫಾಜಿಲ್ ಕೊಲೆ ಪ್ರಕರಣದಲ್ಲಿ ಕಾರಿನ ಕುರಿತಂತೆ ವಿಧಿ ವಿಜ್ಞಾನ ತಜ್ಞರ ವರದಿ ಪ್ರಮುಖ ಪಾತ್ರ ವಹಿಸಲಿದೆ. ಸ್ಥಳಾಂತರ ಮಾಡಲ್ಪಟ್ಟಿರುವ ವಾಹನವನ್ನು ನಾಳೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎಫ್ ಎಸ್ ಎಲ್ ತಜ್ಞರು ಪರಿಶೀಲನೆ ಮಾಡಲಿದ್ದಾರೆ.

- Advertisement -

Latest News

error: Content is protected !!