Friday, June 5, 2026
Homeತಾಜಾ ಸುದ್ದಿಕೊರೋನಾ ಮಹಾಸ್ಪೋಟ: ಕರ್ನಾಟಕದಲ್ಲಿ ಒಂದೇ ದಿನ 248 ಮಂದಿಗೆ ಸೋಂಕು ದೃಢ!

ಕೊರೋನಾ ಮಹಾಸ್ಪೋಟ: ಕರ್ನಾಟಕದಲ್ಲಿ ಒಂದೇ ದಿನ 248 ಮಂದಿಗೆ ಸೋಂಕು ದೃಢ!

- Advertisement -
- Advertisement -

ಬೆಂಗಳೂರು, ಮೇ.29: ಕರ್ನಾಟಕದಲ್ಲಿ ಕಿಲ್ಲರ್ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿದ್ದು, ಒಂದೇ ದಿನ ಬರೋಬ್ಬರಿ 248 ಮಂದಿಯ ದೇಹಕ್ಕೆ ಕೊರೋನಾ ಅಂಟಿಕೊಂಡಿದೆ. ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯು 2,781ಕ್ಕೆ ಏರಿಕೆಯಾಗಿದೆ.

ಇಂದು ಮದ್ಯಾಹ್ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ್ದ ಹೆಲ್ತ್ ಬುಲೆಟಿನ್ ನಲ್ಲಿ 178 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ಖಾತ್ರಿಯಾಗಿತ್ತು. ಸಂಜೆ ಬಿಡುಗಡೆ ಮಾಡಿರುವ ಬುಲೆಟಿನ್ ನಲ್ಲಿ ಮತ್ತೆ 70 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ಜಿಲ್ಲಾವಾರು ಮಾಹಿತಿ

  • ರಾಯಚೂರು 62
  • ಯಾದಗಿರಿ 60
  • ಕಲಬುರ್ಗಿ 61
  • ಉಡುಪಿ 15
  • ಬೆಂಗಳೂರು 13
  • ಬಳ್ಳಾರಿ 09
  • ಚಿಕ್ಕಬಳ್ಳಾಪುರ 05
  • ದಾವಣಗೆರೆ 04
  • ವಿಜಯಪುರ 04
  • ಹಾಸನ 04
  • ತುಮಕೂರು 02
  • ಮಂಡ್ಯ 02
  • ಚಿಕ್ಕಮಗಳೂರು02
  • ಮೈಸೂರು 02
  • ಶಿವಮೊಗ್ಗ 01
  • ಚಿತ್ರದುರ್ಗ 01
  • ಧಾರವಾಡ 01

- Advertisement -

Latest News

error: Content is protected !!