Wednesday, June 3, 2026
Homeಕರಾವಳಿಶುರುವಾಯ್ತು ಕಿಚ್ಚನ ಅಬ್ಬರ: 2500 ಸ್ಕ್ರೀನ್‌ಗಳಲ್ಲಿ ವಿಕ್ರಾಂತ್ ರೋಣ ರಿಲೀಸ್

ಶುರುವಾಯ್ತು ಕಿಚ್ಚನ ಅಬ್ಬರ: 2500 ಸ್ಕ್ರೀನ್‌ಗಳಲ್ಲಿ ವಿಕ್ರಾಂತ್ ರೋಣ ರಿಲೀಸ್

- Advertisement -
- Advertisement -

ಬೆಂಗಳೂರು: ಇಂದಿನಿಂದ ಕಿಚ್ಚನ ಅಬ್ಬರ ಶುರುವಾಗಿದೆ‌.ಜಗತ್ತಿನಾದ್ಯಂತ ಇಂದು ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಬಿಡುಗಡೆಯಾಗಿದೆ. 2500 ಸ್ಕ್ರೀನ್ ಗಳಲ್ಲಿ ‘ವಿಕ್ರಾಂತ್ ರೋಣ’ ತೆರೆ ಕಾಣಲಿದ್ದು, ಇಂದು  ವಿಶ್ವದಾದ್ಯಂತ ಮೊದಲ ದಿನ 9 ಸಾವಿರಕ್ಕೂ ಹೆಚ್ಚು ಶೋ ಪ್ರದರ್ಶನ ಕಾಣಲಿದೆ.

ಕರ್ನಾಟಕದಲ್ಲಿ ಮೊದಲ ದಿನ 325 ಸಿಂಗಲ್ ಸ್ಕ್ರೀನ್ ಗಳಲ್ಲಿ ವಿಕ್ರಾಂತ್ ರೋಣ ತೆರೆ ಕಾಣಲಿದ್ದು, 65 ಮಲ್ಟಿಪ್ಲೆಕ್ಸ್ ನಲ್ಲಿ ‘ವಿಕ್ರಾಂತ್ ರೋಣ’ ಬಿಡುಗಡೆಯಾಗಲಿದೆ. ರಾಜ್ಯಾದ್ಯಂತ ಇಂದು 2500 ಶೋ ನಡೆಯುವ ಸಾಧ್ಯತೆ ಇದೆ. ಬೆಳಗ್ಗೆ 6 ಗಂಟೆಯಿಂದಲೇ ಶೋಗಳು ಆರಂಭವಾಗಿ, ಅಭಿಮಾನಿಗಳ ಸಂಭ್ರಮ ಮುಗಿಲು ಮೆಟ್ಟಿದೆ.

- Advertisement -

Latest News

error: Content is protected !!