Thursday, June 4, 2026
Homeತಾಜಾ ಸುದ್ದಿಮಗುವಿಗೆ ಹಾಲುಣಿಸುತ್ತಿರುವಾಗಲೇ ಹೃದಯಾಘಾತವಾಗಿ ತಾಯಿ ಸಾವು

ಮಗುವಿಗೆ ಹಾಲುಣಿಸುತ್ತಿರುವಾಗಲೇ ಹೃದಯಾಘಾತವಾಗಿ ತಾಯಿ ಸಾವು

- Advertisement -
- Advertisement -

ತೆಲಂಗಾಣ; ಮಗುವಿಗೆ ಹಾಲುಣಿಸುತ್ತಿರುವಾಗಲೇ ತಾಯಿಯೊಬ್ನಳು ಸಾವನ್ನಪ್ಪಿರುವ ಹೃದಯವಿದ್ರಾವಕ  ಘಟನೆ ತೆಲಂಗಾಣದ ನಾಗರಕರ್ನೂಲ್ ನೆರೆಲ್ಲಪಲ್ಲಿಯಲ್ಲಿ ನಡೆದಿದೆ. 25 ವರ್ಷದ ಜಯಶ್ರೀ ಮೃತ ದುರ್ದೈವಿ.

ಜಯಶ್ರೀ ಮೊದಲ ಹೆರಿಗೆಗೆ ತನ್ನ ತಾಯಿಯ ಮನೆಗೆ ಬಂದಿದ್ದರು. 2 ತಿಂಗಳ ಮೊದಲು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಜಯಶ್ರೀ ಅಸ್ವಸ್ಥಗೊಂಡಿದ್ದರು.

ಆಕೆಯ ಪತಿ ಪ್ರಶಾಂತ್ ಶನಿವಾರ ಮಹಬೂಬನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಆಕೆಗೆ ಹೃದಯ ಸಮಸ್ಯೆ ಇದ್ದು, ಔಷಧ ಬಳಸಿದರೆ ಗುಣವಾಗುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ವೈದ್ಯರು ಬರೆದುಕೊಟ್ಟ ಔಷಧಗಳನ್ನು ಸೇವಿಸಿ ಮತ್ತೆ ನೇರಳಪಲ್ಲಿಗೆ ಮರಳಿದ್ದರು.

ಆದರೆ ನಿನ್ನೆ ಬೆಳಿಗ್ಗೆ ಮಗುವಿಗೆ ಹಾಲುಣಿಸುವ ವೇಳೆ ಹೃದಯಾಘಾತವಾಗಿ ಜಯಶ್ರೀ ಕೊನೆಯುಸಿರೆಳೆದಿದ್ದಾರೆ.

- Advertisement -

Latest News

error: Content is protected !!