Thursday, June 4, 2026
Homeಕರಾವಳಿಕಾರ್ಕಳ ತಾಲೂಕು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಬಾವಿಗೆ ಹಾರಿ‌ ಆತ್ಮಹತ್ಯೆ

ಕಾರ್ಕಳ ತಾಲೂಕು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಬಾವಿಗೆ ಹಾರಿ‌ ಆತ್ಮಹತ್ಯೆ

- Advertisement -
- Advertisement -

ಕಾರ್ಕಳ : ತಾಲೂಕು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಡ್ಕೊ ಕಾಲನಿಯಲ್ಲಿ ನಡೆದಿದೆ.  ಸುಶ್ಮಿತಾ (24) ಆತ್ಮಹತ್ಯೆ ಮಾಡಿಕೊಂಡ ಯುವತಿ.  ಹುಡ್ಕೊ ಕಾಲನಿ ನಿವಾಸಿಯಾಗಿದ್ದ ಸುಶ್ಮಿತಾ ನಿನ್ನೆ ಬಾವಿಗೆ ಹಾರಿ ಸಾವಿಗೆ ಶರಣಾಗಿದ್ದಾರೆ.

ಮೃತರು ತಂದೆ, ತಾಯಿ, ಓರ್ವ ಸಹೋದರಿಯನ್ನು ಅಗಲಿದ್ದಾರೆ. ಕಚೇರಿಯಲ್ಲಿ ಉತ್ತಮ ಸಿಬ್ಬಂದಿ ಎಂಬ ಹೆಸರು ಸಂಪಾದಿಸಿದ್ದ ಈಕೆ ಶಾಲಾ ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದರು. ಪ್ರತಿಭೆ ಆಧಾರದಲ್ಲಿ ಸರಕಾರಿ ನೌಕರಿ ಪಡೆದುಕೊಂಡಿದ್ದರು. ಅವರ ಆತ್ಮಹತ್ಯೆಗೆ  ನಿಖರ ಕಾರಣ ತಿಳಿದುಬಂದಿಲ್ಲ.

- Advertisement -

Latest News

error: Content is protected !!