Thursday, June 4, 2026
Homeತಾಜಾ ಸುದ್ದಿಮಾಣಿ: ಶಾಸಕರ ಮುತುವರ್ಜಿಯಿಂದ ರಸ್ತೆ ಅಭಿವೃದ್ಧಿಗೆ 2 ಕೋಟಿ ಅನುದಾನ: ಅಭಿವೃದ್ಧಿ ಕಾರ್ಯದ ನೀಲ ನಕಾಶೆ...

ಮಾಣಿ: ಶಾಸಕರ ಮುತುವರ್ಜಿಯಿಂದ ರಸ್ತೆ ಅಭಿವೃದ್ಧಿಗೆ 2 ಕೋಟಿ ಅನುದಾನ: ಅಭಿವೃದ್ಧಿ ಕಾರ್ಯದ ನೀಲ ನಕಾಶೆ ತಯಾರಿ

- Advertisement -
- Advertisement -

ಮಾಣಿ: ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ದಿಗೆ ಹಾಗೂ ಇತರ ಕಾಮಗಾರಿಗಳಿಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯಕ್ ಉಳಿಪಾಡಿಗುತ್ತುರವರ ವಿಶೇಷ ಮುತುವರ್ಜಿಯಲ್ಲಿ 2 ಕೋಟಿ ಅನುದಾನವು ಲಭಿಸಿದೆ.

ಈ ಅಭಿವೃದ್ಧಿ ಕಾರ್ಯದ  ನೀಲ ನಕಾಶೆಯನ್ನು ತಯಾರಿ ಮಾಡಲು PWD ಇಂಜಿನಿಯರಾದ ಪ್ರೀತಮ್  ರವರು ಇಂದು ಆಗಮಿಸಿದ್ದರು .ಈ ಸಂದರ್ಭದಲ್ಲಿ ಪ್ರಮುಖರಾದ ನೇರಳಕಟ್ಟೆ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಪುಷ್ಪರಾಜ ಚೌಟ, ಗಣೇಶ್ ರೈ ಸಾಗು, ಗ್ರಾಮ ಪಂಚಾಯತ್ ಸದಸ್ಯರಾದ ನಾರಾಯಣ ಶೆಟ್ಟಿ ತೋಟ, ಹರೀಶ್ ಕುಲಾಲ್, ರಾಜೇಶ್ ಕುಲಾಲ್ ಮತ್ತು ಅಶೋಕ್ ಶೆಟ್ಟಿ  ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಅನುದಾನವನ್ನು ಒದಗಿಸಿದ ಬಂಟ್ವಾಳ ಶಾಸಕರಾದ ರಾಜೇಶ್ ನಾಯಕ್ ಉಳಿಪ್ಪಾಡಿಯವರಿಗೆ ಹಾಗೂ ಈ ಬಗ್ಗೆ ಮುತ್ತುವರ್ಜಿ ವಹಿಸಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲಾಯ್ತು.

- Advertisement -

Latest News

error: Content is protected !!