Wednesday, July 2, 2025
Homeಕರಾವಳಿಉಡುಪಿಕೊರೋನಾ ಶಾಕ್ ಗೆ ಕರಾವಳಿ ಶೇಕ್: ಉಡುಪಿಯಲ್ಲಿ 27 ಮತ್ತು ದ.ಕ ದಲ್ಲಿ 6 ...

ಕೊರೋನಾ ಶಾಕ್ ಗೆ ಕರಾವಳಿ ಶೇಕ್: ಉಡುಪಿಯಲ್ಲಿ 27 ಮತ್ತು ದ.ಕ ದಲ್ಲಿ 6 ಮಂದಿಗೆ ಸೋಂಕು ದೃಢ

spot_img
- Advertisement -
- Advertisement -

ಮಂಗಳೂರು: ಕರಾವಳಿಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ. ಇಂದು ಉಡುಪಿಯಲ್ಲಿ ಮತ್ತೆ 27 ಮತ್ತು ದಕ್ಷಿಣ ಕನ್ನಡದಲ್ಲಿ 6 ಹೊಸ ಸೋಂಕು ಪ್ರಕರಣಗಳು ದೃಢವಾಗಿದೆ. ಇಂದು ಪತ್ತೆಯಾದ ಹೆಚ್ಚಿನ ಸೋಂಕಿತರು ಮಹಾರಾಷ್ಟ್ರಸೇರಿದಂತೆ ಅನ್ಯ ರಾಜ್ಯಗಳಿಂದ ಮರಳಿ ಬಂದವರಾಗಿದ್ದಾರೆ.

ಉಡುಪಿಯ 27 ಪ್ರಕರಣಗಳ ಪೈಕಿ 24 ಮಂದಿ ಮಹಾರಾಷ್ಟ್ರ ರಾಜ್ಯದಿಂದ ಬಂದವರಾಗಿದ್ದಾರೆ. ಇಬ್ಬರು ತೆಲಂಗಾಣದಿಂದ ಬಂದಿದ್ದರೆ, ಓರ್ವ ಕೇರಳದಿಂದ ಬಂದ ವ್ಯಕ್ತಿ ಕೋವಿಡ್-19 ಸೋಂಕಿಗೆ ಒಳಗಾಗಿದ್ದಾನೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಡು ಬಂದಿರುವ 6 ಪ್ರಕರಣಗಳ ಮೂಲವು ಮಹಾರಾಷ್ಟ್ರವಾಗಿದೆ.

ರಾಜ್ಯದಲ್ಲಿಂದು ಒಟ್ಟು 75 ಹೊಸ ಸೋಂಕು ಪ್ರಕರಣಗಳು ದೃಢವಾಗಿದೆ. ಇದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 2493ಕ್ಕೆ ಏರಿಕೆಯಾಗಿದೆ.

- Advertisement -
spot_img

Latest News

error: Content is protected !!