- Advertisement -
- Advertisement -
ಬೆಳ್ತಂಗಡಿ: ಮೋದಿ ಸರಕಾರದ ಅಸಂಬದ್ಧ ಮತ್ತು ಜನ ವಿರೋಧಿಯಾದ ತೆರಿಗೆ ಹೇರಿಕೆ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಲಾಯಿಲ ಗ್ರಾಮ ಸಮಿತಿ ವತಿಯಿಂದ ಹಳೆಪೇಟೆ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತು.ಸರಕಾರದ ಜಿ.ಎಸ್.ಟಿ ತೆರಿಗೆಯ ವಿರುದ್ಧ ಭಾರಿ ಘೋಷನೆಗಳನ್ನು ಕೂಗುವುದರ ಮೂಲಕ ವಿರೋಧ ವ್ಯಕ್ತಪಡಿಸಲಾಯಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಲಾಯಿಲ ಗ್ರಾಮ ಸಮಿತಿ ಸದಸ್ಯರಾದ ಶಾಹುಲ್ ಕುಂಟಿನಿ ಮಾತನಾಡಿದರು.
ಈ ಸಂಧರ್ಭ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಸಾದಿಕ್ ಲಾಯಿಲಾ, ಗ್ರಾಮ ಸಮಿತಿ ಅಧ್ಯಕ್ಷರಾದ ಸಲೀಂ ಲಾಯಿಲ, ಕಾರ್ಯದರ್ಶಿಗಳಾದ ಅರೀಫ್ ಕುಂಟಿನಿ, ಪಂಚಾಯತ್ ಸದಸ್ಯ ಸಲೀಂ ಕುಂಟಿನಿ ಮುಂತಾದ ನಾಯಕರು ಉಪಸ್ಥಿತರಿದ್ದರು
- Advertisement -