Thursday, June 4, 2026
Homeಕರಾವಳಿಉಡುಪಿಶಿರೂರು: ವೇಗದಿಂದ ಬಂದ ಆಂಬುಲೆನ್ಸ್ ಟೋಲ್ ಕಂಬಕ್ಕೆ ಢಿಕ್ಕಿ ಪ್ರಕರಣ: ಅಪಘಾತದಲ್ಲಿ ಮೂವರು ಸಾವು, ಓರ್ವ...

ಶಿರೂರು: ವೇಗದಿಂದ ಬಂದ ಆಂಬುಲೆನ್ಸ್ ಟೋಲ್ ಕಂಬಕ್ಕೆ ಢಿಕ್ಕಿ ಪ್ರಕರಣ: ಅಪಘಾತದಲ್ಲಿ ಮೂವರು ಸಾವು, ಓರ್ವ ಗಂಭೀರ

- Advertisement -
- Advertisement -

ಬೈಂದೂರು: ಬೈಂದೂರು ತಾಲೂಕು ವ್ಯಾಪ್ತಿಯ ಶಿರೂರಿನಲ್ಲಿ ನಿಯಂತ್ರಣ ತಪ್ಪಿದ ಆಂಬುಲೆನ್ಸ್ ಟೋಲ್ ಗೇಟ್ ಕಂಬಕ್ಕೆ ಢಿಕ್ಕಿಯಾದ ಪ್ರಕರಣದಲ್ಲಿ ಮೂವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಮೂವರು ಸಾವನ್ನಪ್ಪಿ ಓರ್ವ ಗಂಭೀರ ಗಾಯಗೊಂಡಿದ್ದಾರೆ.ಮೃತಪಟ್ಟವರಲ್ಲಿ ಒಬ್ಬರು ಮಹಿಳೆ, ಇಬ್ಬರು ಪುರುಷರು ಸೇರಿದ್ದಾರೆ. ಅಂಬುಲೆನ್ಸ್ ನಲ್ಲಿ ಇದ್ದ ರೋಗಿ , ರೋಗಿ ಪತ್ನಿ ಮತ್ತು ಸಂಬಂಧಿ  ಸಾವನ್ನಪ್ಪಿದ್ದಾರೆ.ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್‌ನಲ್ಲಿ ಈ  ದುರಂತ ಇಂದು ಸಂಭವಿಸಿತ್ತು. ಹೊನ್ನಾವರದಿಂದ ಕುಂದಾಪುರಕ್ಕೆ ರೋಗಿಗಳನ್ನು ಸಾಗಿಸುತ್ತಿದ್ದ ಅಂಬುಲೆನ್ಸ್ ,ಚಾಲಕನ ನಿಯಂತ್ರಣ ತಪ್ಪಿ ಟೋಲ್ ಕಂಬಕ್ಕೆ ಬಡಿದು ಪಲ್ಟಿಯಾಗಿತ್ತು.ಗಂಭೀರ ಗಾಯಗೊಂಡವರನ್ನು ಕುಂದಾಪುರದ ಆಸ್ಪತ್ರೆಗೆ ಸೇರಿಸಲಾಗಿತ್ತು.

- Advertisement -

Latest News

error: Content is protected !!