Wednesday, June 3, 2026
Homeಕರಾವಳಿಉಡುಪಿಉಡುಪಿ: ಹಾಡಹಗಲೇ ಮನೆಗೆ ನುಗ್ಗಿ‌ 25 ಲಕ್ಷ ಮೌಲ್ಯದ ನಗ‌ ನಗದು ಕಳವು

ಉಡುಪಿ: ಹಾಡಹಗಲೇ ಮನೆಗೆ ನುಗ್ಗಿ‌ 25 ಲಕ್ಷ ಮೌಲ್ಯದ ನಗ‌ ನಗದು ಕಳವು

- Advertisement -
- Advertisement -

ಉಡುಪಿ: ಹಾಡಹಗಲೇ ಮನೆಗೆ ನುಗ್ಗಿ‌‌  25 ಲಕ್ಷ ರೂ. ಮೌಲ್ಯದ ನಗನಗದು ಕಳವು ಮಾಡಿರುವ ಘಟನೆ ನಗರದ ಕೋರ್ಟ್ ಹಿಂಬದಿ ರಸ್ತೆಯ ವಕೀಲರೊಬ್ಬರ ಮನೆಯಲ್ಲಿ ನಡೆದಿದೆ.‌

ಉಡುಪಿಯ ವಕೀಲೆ ವಾಣಿ ವಿ. ರಾವ್ ಎಂಬವರ ನಿನ್ನೆ ಬೆಳಗ್ಗೆ ಮನೆಗೆ ನುಗ್ಗಿದ ಕಳ್ಳರು ಬೆಡ್‌ರೂಂನಲ್ಲಿದ್ದ ಕಬ್ಬಿಣದ ಕಪಾಟಿನ ಲಾಕರ್‌ನಲ್ಲಿ ಇರಿಸಿದ್ದ ಪರ್ಸ್ ನಲ್ಲಿದ್ದ 45,000 ರೂ. ನಗದು, ಚಿನ್ನಾಭರಣಗಳು ಹಾಗೂ 4 ರೇಷ್ಮೆ ಸೀರೆ ಸೇರಿದಂತೆ ಐದು ಸೀರೆಗಳನ್ನು ಕಳವು ಮಾಡಿರುವುದಾಗಿ ಎನ್ನಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!