Saturday, October 17, 2026
Homeಕರಾವಳಿತಿನ್ನುವ ಅಕ್ಕಿ, ಮಕ್ಕಳ ಪೆನ್ಸಿಲ್ ಮೇಲೆ ಟ್ಯಾಕ್ಸ್ : ಮಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ಉಪ ನಾಯಕ...

ತಿನ್ನುವ ಅಕ್ಕಿ, ಮಕ್ಕಳ ಪೆನ್ಸಿಲ್ ಮೇಲೆ ಟ್ಯಾಕ್ಸ್ : ಮಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ಉಪ ನಾಯಕ ಯು‌.ಟಿ. ಖಾದರ್ ಟೀಕೆ

- Advertisement -
- Advertisement -

ಮಂಗಳೂರು: ತಿನ್ನುವ ಅಕ್ಕಿಯ ಮೇಲೆ, ಮಕ್ಕಳ ಪೆನ್ಸಿಲ್ ಮೇಲೆ ಟ್ಯಾಕ್ಸ್ ಹಾಕುತ್ತಿದ್ದರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಮಂಗಳೂರಿನಲ್ಲಿ ವಿಪಕ್ಷ ಉಪನಾಯಕ ಯು.ಟಿ. ಖಾದರ್ ವಾಗ್ದಾಳಿ ನಡೆಸಿದ್ದಾರೆ.

ಮೊಸರು, ಗೋಧಿ, ಬೆಲ್ಲ ಎಲ್ಲದಕ್ಕೂ ಟ್ಯಾಕ್ಸ್ ಹಾಕಿ
ಬಡವರ ಟ್ಯಾಕ್ಸ್ ಹಣದಲ್ಲೇ ಸರ್ಕಾರ ನಡೆಸುತ್ತಿದ್ದಾರೆ ಎಂದು ಆರೋಪ ಮಾಡಿರುವ ಖಾದರ್, ಜನ ಸಾಮಾನ್ಯರ ಆರ್ಥಿಕ ಪರಿಸ್ಥಿತಿ ಮೇಲೆತ್ತಲು ಕೇಂದ್ರ ಸರ್ಕಾರ ಯೋಜನೆ ತಂದಿಲ್ಲ ಎಂದು ಟೀಕಿಸಿದ್ದಾರೆ.

ಜಿಎಸ್ ಟಿ ವಿಚಾರದಲ್ಲಿ ಕರ್ನಾಟಕಕ್ಕೆ ಕೇಂದ್ರ ಏನೂ ಕೊಡದಿದ್ದರೂ ಸಂಸದರು ಅದನ್ನು ಕೇಳುತ್ತಿಲ್ಲ, ಬಿಜೆಪಿ ಸರ್ಕಾರ ನಮಗೆ ಮೋಸ ಮಾಡಿ ತನ್ನ ಖಜಾನೆ ತುಂಬಿಸಿಕೊಳ್ಳುತ್ತಿದೆ ಎಂದು ಯು.ಟಿ. ಖಾದರ್ ಹೇಳಿದ್ದಾರೆ.

ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಬುಡಮೇಲಾಗಿದ್ದು, ಜನರ ಮೇಲೆ ಟ್ಯಾಕ್ಸ್ ಹೊರೆ ಹಾಕಿದ ದುಡ್ಡು ಎಲ್ಲಿಗೆ ಹೋಗ್ತಿದೆ? ಎಂದು ಖಾದರ್ ಪ್ರಶ್ನಿಸಿದ್ದು, ಇದೊಂದು ಅಪಾಯದ ಮುನ್ಸೂಚನೆಯಾಗಿದ್ದು ನಮ್ಮ ದೇಶಕ್ಕೆ ಚಿಂತಾಜನಕ ಪರಿಸ್ಥಿತಿ ಇದೆ ಎಂದು ಯು.ಟಿ. ಖಾದರ್ ಹೇಳಿದ್ದಾರೆ.

ದೇಶದ ಜನರನ್ನು ಸರ್ಕಾರ ವೈರಿಗಳ ರೀತಿ ನೋಡಿ ಸರ್ಕಾರ ನಡೆಸುತ್ತಿದ್ದು, ಈ ಬಗ್ಗೆ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡಲಿದೆ ಎಂದು ಮಂಗಳೂರಿನಲ್ಲಿ ಖಾದರ್ ಹೇಳಿಕೆ ನೀಡಿದ್ದಾರೆ.

- Advertisement -

Latest News

error: Content is protected !!