Thursday, June 4, 2026
Homeಕರಾವಳಿಸುಳ್ಯ: ಕಾರು ಚಲಾಯಿಸುತ್ತಿದ್ದ ವೇಳೆ ಹೃದಯಾಘಾತ, ಭಾರಿ ಅನಾಹುತ ತಪ್ಪಿಸಿದ ವ್ಯಾಪಾರಿ

ಸುಳ್ಯ: ಕಾರು ಚಲಾಯಿಸುತ್ತಿದ್ದ ವೇಳೆ ಹೃದಯಾಘಾತ, ಭಾರಿ ಅನಾಹುತ ತಪ್ಪಿಸಿದ ವ್ಯಾಪಾರಿ

- Advertisement -
- Advertisement -

ಸುಳ್ಯ: ಕಾರು ಚಾಲಾಯಿಸಿಕೊಂಡು ಇರುವಾಗಲೇ ಹೃದಯಘಾತವಾಗಿ ವ್ಯಕ್ತಿಯೊಬ್ಬರಯ ಮೃತ ಪಟ್ಟ ಘಟನೆ ಸುಳ್ಯ ಪೇಟೆಯಲ್ಲಿ ಇಂದು ನಡೆದಿದೆ.
ಮಂಡೆಕೋಲು ನಿವಾಸಿ ಪೋಕರ್ ಕುಂಞ ಎಂಬವರೇ ಕಾರು ಚಾಲಾಯಿಸಿಕೊಂಡು ಹೋಗುತ್ತಿರುವಾಗ ಹೃದಯಘಾತವಾಗಿ ಮೃತಪಟ್ಟ ವ್ಯಕ್ತಿಯಾಗಿದ್ದಾರೆ.

ಪೋಕರ್ ಕುಂಞಿ ಅವರು ಕಾರು ಚಾಲನೆ ಮಾಡುತ್ತಿ ಬರುತ್ತಿದ್ದಾಗ ಸುಳ್ಯ ಪೋಲೀಸ್ ಠಾಣೆ ಸಮೀಪ ಕಾರು ಸ್ಕೂಟಿಯೊಂದಕ್ಕೆ ಢಿಕ್ಕಿ ಹೊಡೆದು ಮುಂದಕ್ಕೆ ಬಂದು‌ ಮತ್ತೊಂದು ಕಾರಿಗೆ ತಾಗಿ ನಿಂತಿದೆ. ಇದೇ ವೇಳೆ ಕಾರಿನ ಸ್ಟೇರಿಂಗ್ ಗೆ ಮೇಲೆ ಅವರು ತಲೆ ತಗ್ಗಿಸಿ ಬಿದ್ದರು.

ಇದನ್ನು ಗಮನಿಸಿದ ಸ್ಥಳೀಯ ಅಂಗಡಿಯೊಂದರ ವ್ಯಾಪಾರಿ ಬಂದು ಕಾರಿನ ಡೋರ್ ತೆಗೆದು ಹ್ಯಾಂಡ್ ಬ್ರೇಕ್ ಹಾಕಿ ಕಾರು ನಿಲ್ಲಿಸಿ ಮುಂದಾಗಬಹುದಾದ ದುರಂತ ತಪ್ಪಿಸಿದ್ದಾರೆ. ಬಳಿಕ ಅಲ್ಲಿದ್ದವರು ಪೋಕರೆ ಕುಂಞಿಯವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದರೂ ಆ ವೇಳೆಗೆ ಅವರು ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ.

- Advertisement -

Latest News

error: Content is protected !!